Telegram Join My Telegram   WhatsApp Join My WhatsApp

T20WC ವಿಶ್ವಕಪ್ 2026: ವೆಸ್ಟ್ ಇಂಡೀಸ್ ಅಜೇಯ ಓಟ

2026ರ ವಿಶ್ವಕಪ್ನಲ್ಲಿ ಇಟಲಿಯ ಪಯಣ ಇಂದು ಕೊನೆಗೊಂಡಿದೆ ಇಟಲಿ ಮತ್ತು ವೆಸ್ಟ್ ಇಂಡೀಸ್ 37ನೇ ಪಂದ್ಯವನ್ನ ಕೊಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಆಡಿದ್ದವು. ಇಂದು ಉಭಯ ತಂಡಗಳಿಗೆ ಲೀಗ ಹಂತದ ಕೊನೆಯ ಪಂದ್ಯವಾಗಿತ್ತು ವೆಸ್ಟ್ ಇಂಡೀಸ್ ತಂಡ ಇಟಲಿಯನ್ನ 42 ರನ್ ಗಳಿಂದ ಸೋಲಿಸಿತು. ಈ ಮೂಲಕ ಇಟಲಿಯ ಜರ್ನಿ ವಿಶ್ವಕಪ್ ನಲ್ಲಿ ಅಂತ್ಯವಾಯಿತು. ಹಾಗೂ ಇದರ ಜೊತೆಗೆ ಸೂಪರ್ 8 ಹಂತಕ್ಕೆ ವೆಸ್ಟ್ ಇಂಡೀಸ್ ಅರ್ಹತೆಯನ್ನು ಪಡೆಯಿತು.

ಚೊಚ್ಚಲ ವಿಶ್ವಕಪ್ ಪಂದ್ಯವನ್ನು ಆಡಿದ್ದ ಇಟಲಿ ತಂಡ ಐತಿಹಾಸಿಕ ಆಟವನ್ನು ಆಡುವ ಮೂಲಕ ಕ್ರಿಕೆಟ್ನ ಲೋಕದ ಗಮನ ಸೆಳೆದಿತ್ತು. ನೇಪಾಳದ ವಿರುದ್ಧದ ಪಂದ್ಯದಲ್ಲಿ 10 ವಿಕೆಟ್ ಗಳಿಂದ ಗೆದ್ದು ಐತಿಹಾಸಿಕ ಸಾಧನೆಯನ್ನು ಮಾಡಿತ್ತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಬಂದ ವೆಸ್ಟ್ ಇಂಡೀಸ್ ಆರಂಭಿಕ ಆಟಗಾರರು ನಿರೀಕ್ಷಿತ ಪ್ರದರ್ಶನವನ್ನ ನೀಡಲಿಲ್ಲ ಆರಂಭಿಕ ಆಟಗಾರ ಬ್ರಾಂಡನ್ ಕಿಂಗ್ ಅವರು ಕೇವಲ ನಾಲ್ಕು ರನ್ ಗೆ ವಿಕೆಟ್ ಒಪ್ಪಿಸಿದರು. ಇತ್ತ ಶೈ ಹೋಪ್ ಅದ್ಭುತಗಳಲ್ಲಿ 75 ಗಳಿಸಿದ್ದ ಪರಿಣಾಮ ವೆಸ್ಟ್ ಇಂಡೀಸ್ ಸ್ಪರ್ಧಾತ್ಮಕ ಮೊತ್ತವನ್ನು ಇಟಲಿಗೆ ಗುರಿಯಾಗಿ ನೀಡಿತು. ಬ್ಯಾಟಿಂಗ್ ಫಿಕ್ಸ್ ನಲ್ಲಿ ಬೌಲಿಂಗ್ ಕೂಡ ಮಾಡಬಹುದು ಎಂದು ಇಟಲಿಯ ಬೌಲರುಗಳು ತೋರಿಸಿಕೊಟ್ಟರು. ಬೆನ್ ಮಾನೆಂಟಿ ಮತ್ತು ಕ್ರಿಷನ್ ಕಲುಗಮಗೆ ಡೆತ್ ಓವರ್ ನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡುವ ಮೂಲಕ ತಲಾ ಎರಡು ವಿಕೆಟ್ ಪಡೆದರು.

ಬ್ಯಾಟಿಗೆ ಬಂದ ಇಟಲಿ 18 ಓವರ್ಗಳಲ್ಲಿ 123 ರನ್ಗಳಿಗೆ ಆಲ್ ಔಟ್ ಆಯ್ತು ಈ ಮೂಲಕ ವೆಸ್ಟ್ ಇಂಡೀಸ್ ಸುಲಭವಾಗಿ 42 ರನ್ ಗಳಿಂದ ಜಯಭೇರಿ ಬಾರಿಸಿತ್ತು. ಈ ಮೂಲಕ ಇಟಲಿ ವಿಶ್ವ ಕಪ್ ಜರ್ನಿಯನ್ನು ಅಂತ್ಯಗೊಳಿಸಿತು.

ಇಟಲಿಯ ಬ್ಯಾಟರ್ ಗಳು ವೆಸ್ಟ್ ಇಂಡೀಸ್ ಬೌಲರ್ ಗಳು ಹಾಕಿದ ಎಸೆತಕ್ಕೆ ನಡುಗಿದ್ದರು. ಯಾರೊಬ್ಬರೂ ಕೂಡ ವೆಸ್ಟ್ ಇಂಡೀಸ್ ಬೌಲರ್ ವಿರುದ್ಧ ಪ್ರತಿರೋಧವನ್ನು ತೋರಲಿಲ್ಲ.

ನೇಪಾಳ ಪಂದ್ಯನಲ್ಲಿ ಬಂದಂತಹ ಕಲಾತ್ಮಕ ಆಟ ಮತ್ತೆ ಅಲ್ಲಿ ಮುಂದುವರೆಯಲಿಲ್ಲ. ಪವರ್ ಪ್ಲೇ ಮುಗಿಯುವಷ್ಟರಲ್ಲಿ ಇಟಲಿ ತಂಡ ಪ್ರಮುಖ ನಾಲ್ಕು ಬ್ಯಾಟರಗಳನ್ನ ಕಳೆದುಕೊಂಡಿತ್ತು.

ಇಟಲಿಯ ಬೌಲರ್ಗಳು ಮೇಲ್ಗೈ ಸಾಧಿಸಿದ್ದರು ಸಹ ಇಟಲಿ ತಂಡದ ಬ್ಯಾಟರಿಗಳು ಆ ರನ್ಗಳನ್ನ ಗಳಿಸುವಲ್ಲಿ ವಿಫಲರಾದ ಪರಿಣಾಮ ಇಟಲಿ ತಂಡ ಸೋಲಿನ ಮೂಲಕ ತನ್ನ ವಿಶ್ವಕಪ್ ಜರ್ನಿಯನ್ನು ಅಂತ್ಯಗೊಳಿಸಿತು.

Leave a Comment