Telegram Join My Telegram   WhatsApp Join My WhatsApp

ಡಿಕೆ ಶಿವಕುಮಾರ್ ಮಾತಿಗೆ ಕೌಂಟರ್ ಕೊಟ್ಟ ಶಾಸಕ ಧೀರಜ್ ಮುನಿರಾಜು

ಬೆಂಗಳೂರು ನಗರದಲ್ಲಿ ಕಸ ವಿಲೇವಾರಿ ವಿಚಾರ ಇದೀಗ ರಾಜಕೀಯ ಕಾಳಗದ ರೂಪ ಪಡೆದುಕೊಂಡಿದೆ. ಉಪ ಮುಖ್ಯಮಂತ್ರಿ D. K. ಶಿವಕುಮಾರ್ದೊ ಮತ್ತು ಡ್ಡಬಳ್ಳಾಪುರ ಬಿಜೆಪಿ ಶಾಸಕ ಧೀರಜ್ ಮುನಿರಾಜು ನಡುವೆ ನಡೆದ ತೀವ್ರ ವಾಗ್ವಾದ ರಾಜ್ಯ ರಾಜಕೀಯಕ್ಕೆ ಹೊಸ ಚರ್ಚೆ ಹುಟ್ಟುಹಾಕಿದೆ. “ಬೆಂಗಳೂರು ತ್ಯಾಜ್ಯವನ್ನು ನಮ್ಮ ತಾಲೂಕಿನ ಮೇಲೆ ಹೇರಬೇಡಿ. ನಿಮ್ಮ ಕ್ಷೇತ್ರ ಕನಕಪುರದಲ್ಲೇ ವೈಜ್ಞಾನಿಕವಾಗಿ ವಿಲೇವಾರಿ ಮಾಡಿ” ಎಂದು ಧೀರಜ್ ಮುನಿರಾಜು ತಿರುಗೇಟು ನೀಡಿರುವುದು ಗಮನಾರ್ಹವಾಗಿದೆ.

ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾದ ಕಸದ ವಿಚಾರ 

ಬೆಂಗಳೂರು ನಗರದ ತ್ಯಾಜ್ಯ ವಿಲೇವಾರಿ ಹಲವು ವರ್ಷಗಳಿಂದ ಸವಾಲಿನ ವಿಷಯವಾಗಿದೆ. ನಗರದ ಜನಸಂಖ್ಯೆ ಹೆಚ್ಚಾದಂತೆ ಪ್ರತಿದಿನ ಸಾವಿರಾರು ಟನ್ ಕಸ ಉತ್ಪತ್ತಿಯಾಗುತ್ತಿದೆ. ಈ ಕಸದ ನಿರ್ವಹಣೆಗಾಗಿ ನಗರ ಹೊರವಲಯದ ಪ್ರದೇಶಗಳನ್ನು ಬಳಸಲಾಗುತ್ತಿದೆ. ಆದರೆ ಇತ್ತೀಚೆಗೆ ಹೆಚ್ಚುವರಿ ಕಸವನ್ನು ದೊಡ್ಡಬಳ್ಳಾಪುರ ಭಾಗಕ್ಕೆ ಸಾಗಿಸಲು ಯತ್ನಿಸಿದ ಹಿನ್ನೆಲೆಯಲ್ಲಿ ಸ್ಥಳೀಯರಿಂದ ವಿರೋಧ ವ್ಯಕ್ತವಾಯಿತು.

ಈ ವಿರೋಧಕ್ಕೆ ಪ್ರತಿಕ್ರಿಯೆ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್, “ಅವಕಾಶ ಕೊಡದಿದ್ದರೆ ಆ ಊರಲ್ಲಿ ಕಸ ಎತ್ತಲು ಬಿಡಲ್ಲ” ಎಂದು ಎಚ್ಚರಿಕೆ ನೀಡಿದ್ದರು. ಈ ಹೇಳಿಕೆ ರಾಜಕೀಯ ವಾತಾವರಣವನ್ನು ಮತ್ತಷ್ಟು ಉಷ್ಣಗೊಳಿಸಿತು.

ಕನಕಪುರಕ್ಕೆ ಕಸ ಹಾಕಿಸಿಕೊಳ್ಳಿ” – ಧೀರಜ್ ಸವಾಲು

ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಶಾಸಕ ಧೀರಜ್ ಮುನಿರಾಜು, “ದೊಡ್ಡಬಳ್ಳಾಪುರಕ್ಕೆ ತರಲು ಯತ್ನಿಸುವ ಕಸವನ್ನು ನಿಮ್ಮ ಕ್ಷೇತ್ರ ಕನಕಪುರದಲ್ಲೇ ವಿಲೇವಾರಿ ಮಾಡಿ. ಅಲ್ಲಿಗೆ ಅನುದಾನವೂ ಪಡೆದುಕೊಳ್ಳಿ” ಎಂದು ಸವಾಲು ಹಾಕಿದರು.

ಬೆಂಗಳೂರು ದಕ್ಷಿಣ ಹಾಗೂ ಕನಕಪುರ ಭೌಗೋಳಿಕವಾಗಿ ಹತ್ತಿರವಿರುವುದರಿಂದ, ಕಸ ಸಾಗಿಸುವ ವೆಚ್ಚವೂ ಕಡಿಮೆಯಾಗುತ್ತದೆ ಎಂದು ಅವರು ವಾದಿಸಿದರು. “ನಮ್ಮ ತಾಲೂಕಿನ ಮೇಲೆ ಮಾತ್ರ ಹೊರೆ ಹಾಕುವುದು ನ್ಯಾಯವಲ್ಲ” ಎಂದು ಅವರು ಸ್ಪಷ್ಟಪಡಿಸಿದರು.

“ನನ್ನ ಹೋರಾಟ ಮುಂದುವರೆಯಲಿದೆ”

ಈ ವಿಷಯದಲ್ಲಿ ತಮ್ಮ ನಿಲುವು ಅಚಲ ಎಂದು ಧೀರಜ್ ಮುನಿರಾಜು ಘೋಷಿಸಿದ್ದಾರೆ. “ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಸ ವಿಲೇವಾರಿ ಯೋಜನೆಯನ್ನು ನನ್ನ ತಾಲೂಕಿಗೆ ಮಾತ್ರ ಹೇರಲು ಯತ್ನಿಸುತ್ತಿದ್ದಾರೆ. ನಾನು ಶಾಸಕನಾಗಿರುವವರೆಗೂ ಟೆಟ್ರಾಫಾರ್ಮ್ ತೆರೆಯಲು ಅವಕಾಶ ನೀಡುವುದಿಲ್ಲ” ಎಂದು ಎಚ್ಚರಿಸಿದರು.

ಅಂಬೇಡ್ಕರ್ ನೀಡಿದ ಸಂವಿಧಾನದಡಿ ಜನರು ನೀಡಿದ ಅಧಿಕಾರದ ಆಧಾರದಲ್ಲಿ ನಾನು ಹೋರಾಟ ನಡೆಸುತ್ತಿದ್ದೇನೆ. ನನ್ನ ವಿರುದ್ಧ ಯಾವುದೇ ಕ್ರಮ ಕೈಗೊಂಡರೂ ಹೋರಾಟ ನಿಲ್ಲುವುದಿಲ್ಲ ಎಂದು ಅವರು ಟಾಂಗ್ ನೀಡಿದ್ದಾರೆ.

70 ಲಾರಿಗಳ ಸಂಚಾರ – ಯಥಾಸ್ಥಿತಿ

ರಾಜಕೀಯ ಗೊಂದಲದ ನಡುವೆಯೂ, ದೊಡ್ಡಬಳ್ಳಾಪುರ ಸಮೀಪದ ಎಂಎಸ್‌ಜಿಪಿ ಘಟಕಕ್ಕೆ ಬುಧವಾರದಿಂದ ಎಂದಿನಂತೆ 70 ಕಸದ ಲಾರಿಗಳು ಆಗಮಿಸಿವೆ. ಸ್ಥಳೀಯ ಗ್ರಾಮಸ್ಥರು ಲಾರಿಗಳ ಸಂಚಾರದ ಮೇಲೆ ನಿಗಾ ಇಟ್ಟಿದ್ದಾರೆ. ಅಧಿಕಾರಿಗಳ ಪ್ರಕಾರ, ಲಾರಿಗಳ ಸಂಖ್ಯೆ ಯಥಾಸ್ಥಿತಿಗೆ ಬಂದಿದೆ.

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (ಎಂಎಸ್‌ಡಬ್ಲ್ಯೂಎಂಎಲ್‌) ಅಧಿಕಾರಿಗಳು ಸ್ಥಳೀಯ ಗ್ರಾಮಸ್ಥರು ಹಾಗೂ ಶಾಸಕರೊಂದಿಗೆ ಮಾತುಕತೆ ನಡೆಸಿ, ಅಭಿವೃದ್ಧಿ ಅನುದಾನದ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಘಟಕಗಳಲ್ಲಿ ಕಸ ವಿಲೇವಾರಿಗೆ ಮತ್ತೆ ಅವಕಾಶ ನೀಡಲಾಗಿದೆ.

ನಗರದಲ್ಲಿ ಉಲ್ಬಣಿಸಿದ್ದ ಕಸದ ಸಂಕಷ್ಟ

ಕಳೆದ ಎರಡು ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಕಸದ ಸಮಸ್ಯೆ ತೀವ್ರವಾಗಿತ್ತು. ಮಿಟ್ಟಗಾನಹಳ್ಳಿ-ಕಣ್ಣೂರು-ಬೆಳ್ಳಹಳ್ಳಿ ಹಾಗೂ ದೊಡ್ಡಬಳ್ಳಾಪುರ ಘಟಕಗಳಲ್ಲಿ ವಿಲೇವಾರಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ, ನಗರದ ಹಲವೆಡೆ ಕಸ ತುಂಬಿದ ಕಾಂಪ್ಯಾಕ್ಟರ್‌ಗಳು ಹಾಗೂ ಆಟೊ ಟಿಪ್ಪರ್‌ಗಳು ರಸ್ತೆಗಳಲ್ಲಿ ಸಾಲುಗಟ್ಟಿ ನಿಂತಿದ್ದವು.

ಕೆಲವು ಪ್ರದೇಶಗಳಲ್ಲಿ ಕಸದ ರಾಶಿ ಹೆಚ್ಚಾಗಿ ದುರ್ವಾಸನೆ ಹರಡಿತ್ತು. ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಆರೋಗ್ಯದ ದೃಷ್ಟಿಯಿಂದಲೂ ಇದು ಆತಂಕಕಾರಿ ಸ್ಥಿತಿಯಾಗಿತ್ತು.

ಗುರುವಾರದಿಂದ ಪುನರಾರಂಭ

ಸ್ಥಳೀಯ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟ ನಂತರ ಗುರುವಾರ ಬೆಳಗ್ಗೆ 7 ಗಂಟೆಯಿಂದಲೇ ಕಸ ವಿಲೇವಾರಿ ಕಾರ್ಯ ಪುನರಾರಂಭವಾಗಿದೆ. ಕಾಂಪ್ಯಾಕ್ಟರ್‌ಗಳು ಘಟಕಗಳಲ್ಲಿ ಕಸ ಖಾಲಿ ಮಾಡಿದ್ದು, ನಗರದಲ್ಲಿದ್ದ ಆಟೊ ಟಿಪ್ಪರ್‌ಗಳಲ್ಲಿನ ಕಸವನ್ನು ವರ್ಗಾಯಿಸಲಾಗಿದೆ. ಇದರಿಂದ ನಗರದಲ್ಲಿ ಸ್ಥಿತಿ ಕ್ರಮೇಣ ಸಾಮಾನ್ಯವಾಗುತ್ತಿದೆ.

ಮುಂದೆ ಏನು?

ಬೆಂಗಳೂರು ಕಸ ವಿವಾದವು ಕೇವಲ ಆಡಳಿತಾತ್ಮಕ ವಿಷಯವಲ್ಲ, ಇದು ರಾಜಕೀಯ ಹಾಗೂ ಪ್ರಾದೇಶಿಕ ಸಮತೋಲನದ ಪ್ರಶ್ನೆಯಾಗಿದೆ. ನಗರ ಅಭಿವೃದ್ಧಿಯ ಜೊತೆಗೆ ಗ್ರಾಮಾಂತರ ಪ್ರದೇಶಗಳ ಹಿತಾಸಕ್ತಿಯೂ ಮುಖ್ಯವಾಗಿದೆ. ಸರ್ಕಾರ ಮತ್ತು ಸ್ಥಳೀಯ ಪ್ರತಿನಿಧಿಗಳು ಸಮನ್ವಯದಿಂದ ಕೆಲಸ ಮಾಡಿದರೆ ಮಾತ್ರ ದೀರ್ಘಕಾಲಿಕ ಪರಿಹಾರ ಸಾಧ್ಯ.

ಇದೀಗ ರಾಜಕೀಯ ವಾಕ್ಸಮರ ತಾತ್ಕಾಲಿಕವಾಗಿ ಶಮನಗೊಂಡಿದ್ದರೂ, ಮುಂದಿನ ದಿನಗಳಲ್ಲಿ ಈ ವಿಚಾರ ಮತ್ತೆ ರಾಜಕೀಯ ವೇದಿಕೆಯಲ್ಲಿ ಸದ್ದು ಮಾಡುವ ಸಾಧ್ಯತೆ ಇದೆ. ಬೆಂಗಳೂರು ಕಸ ಸಮಸ್ಯೆಗೆ ಶಾಶ್ವತ ಪರಿಹಾರ ಯಾವಾಗ ಸಿಗುತ್ತದೆ ಎಂಬುದು ಜನರ ಪ್ರಮುಖ ಪ್ರಶ್ನೆಯಾಗಿದೆ.

DK ಶಿವಕುಮಾರ್ ಅವರ ರಾಜಕೀಯ ಬೆಳವಣಿಗೆ 

1989ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ ಆಗುತ್ತಾರೆ

ಕನಕಪುರ ಕ್ಷೇತ್ರದಿಂದ ಹಲವಾರು ಬಾರಿ ಸ್ಪರ್ಧೆಸಿ ಗೆಲುವು ಪಡೆದಿದ್ದಾರೆ

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ನ ನಲ್ಲಿ ಪ್ರಮುಖ ನಾಯಕರಾಗಿ ಕರ್ನಾಟಕದಲ್ಲಿ ಅವರು ಗುರುತಿಸಿ ಕೊಂಡಿದ್ದಾರೆ.

2020ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದರು (KPCC)

ಕರ್ನಾಟಕದಲ್ಲಿ ಕಾಂಗ್ರೆಸ್‌ನ್ನು ಪುನರ್‌ ಸಂಘಟಿಸಲು ಪ್ರಮುಖ ಪಾತ್ರ ವಹಿಸಿದ್ದರು ಹಾಗೂ ಅತ್ಯುನ್ನತ ಕೆಲಸ ಕೂಡ ಮಾಡಿದ್ದಾರೆ.

DK ಶಿವಕುಮಾರ್ ಸಾದನೆಗಳು 

ಬೆಂಗಳೂರು ನಗರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವಲ್ಲಿ ಅಗ್ರ ಗಣ್ಯರು ಎಂದು ಹೇಳಬಹುದಾಗಿದೆ

ನೀರಾವರಿ ಯೋಜನೆಗಳಲ್ಲಿ ಪ್ರಮುಖ ಪಾತ್ರವನ್ನು ಕೂಡ DK ಶಿವಕುಮಾರ್ ಅವರು ವಹಿಸಿದ್ದರು ಎಂಬುದು ಗಮನರ್ಹ

ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಪ್ರಯತ್ನ ಪಟ್ಟ ಪ್ರಮುಖ ತಂತ್ರಜ್ಞ ಎಂದೇ ಹೇಳಬಹುದು.

ತಂತ್ರಜ್ಞ ಎಂದು ಕರೆಯಲು ಕಾರಣ :

DK ಶಿವಕುಮಾರ್ ಅವರನ್ನು “Political strategist” (ರಾಜಕೀಯ ತಂತ್ರಜ್ಞ) ಎಂದು ಕರೆಯುತ್ತಾರೆ ಕಾರಣ ತನ್ನ ವಿಭಿನ್ನ ಮಾತುಗಳು ಹಾಗೂ ಕಾರ್ಯ ವೈಖರಿಯ ಮೂಲಕ ಉನ್ನತ ಕಾರ್ಯ ಮಾಡುವತ್ತ ಸದಾ ಗಮನ ಹರಿಸುತ್ತಾರೆ

ಕಠಿಣ ಪರಿಸ್ಥಿತಿಗಳಲ್ಲೂ ಪಕ್ಷವನ್ನು ಉಳಿಸುವ ನಾಯಕ ಎಂದು ಹೆಸರು ಪಡೆದಿದ್ದಾರೆ ಅಲ್ಲದೆ ಅದರಂತೆ ಶ್ರಮ ಕೂಡ ವಹಿಸುತ್ತಾರೆ.

ಸಂಘಟನೆ ಶಕ್ತಿ ಮಾಡುವ ಅತೀ ದೊಡ್ಡ ಶಕ್ತಿ 

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್  ಪಕ್ಷವನ್ನು ಗ್ರಾಮ ಮಟ್ಟದಿಂದ ಬಳಪಡಿಸಲು ಅವರು ಸದಾ ಪ್ರಯತ್ನ ನಡೆಸುತ್ತಾರೆ.

ಕಾರ್ಯಕರ್ತರನ್ನು ನೇರವಾಗಿ ಸಂಪರ್ಕಿಸುವ ಶೈಲಿ ಎಲ್ಲರಿಗಿಂತ ವಿಭಿನ್ನವಾಗಿದೆ.

ಬೂತ್ ಮಟ್ಟದ ಸಂಘಟನೆಗೆ ಹೆಚ್ಚು ಮಹತ್ವ ಕೊಡುವುದರ ಮೂಲಕ ಯಾವುದೇ ಅವ್ಯವಹಾರ ಆಗದಂತೆ ನೋಡಿ ಕೊಳ್ಳುವತ್ತ ಗಮನ ಹರಿಸುತ್ತಾರೆ.ಈ ರೀತಿ ಮಾಡುವುದರಿಂದ ಚುನಾವಣೆಯಲ್ಲಿ ground-level support ಹೆಚ್ಚುತ್ತದೆ.

DK ಅವರ  ರಾಜಕೀಯ ಸಂಬಂಧ 

ಎಲ್ಲಾ ನಾಯಕರೊಂದಿಗೆ ಉತ್ತಮ ಸಂಪರ್ಕ ಇಟ್ಟುಕೊಳ್ಳುತ್ತಾರೆ ಎಂಬುದು ವಿಶೇಷ

ವಿರೋಧ ಪಕ್ಷದ ನಾಯಕರೊಂದಿಗೆ ಸಹ ಸಂಪರ್ಕ ಉಳಿಸಿಕೊಳ್ಳುವ ಗುಣ ಹೊಂದಿದ್ದಾರೆ ಅದರಂತೆ ಕೂಡ ಅವರು ಮಾಡುತ್ತಾರೆ.

ಪಕ್ಷದ ಒಳಗಿನ ಯಾವುದೇ ಭಿನ್ನಾಭಿಪ್ರಾಯಗಳು ಭೂಗೆಲೆದ್ದಾಗ ಕಡಿಮೆ ಮಾಡುವಲ್ಲಿ ಪರಿಣತಿ ಅವರು ಹೊಂದಿದ್ದಾರೆ. ಇದರಿಂದ ಪಕ್ಷದೊಳಗಿನ ಏಕತೆ ಹೆಚ್ಚುತ್ತದೆ ಇನ್ನು ಸಮರ್ಥವಾಗಿ ಕೆಲಸ ಮಾಡಲು ಅನುಕೂಲ ವಾಗುತ್ತದೆ

ಸಂಪನ್ಮೂಲ ವ್ಯವಸ್ಥೆ

  • ಚುನಾವಣೆ ಸಮಯದಲ್ಲಿ ಹಣಕಾಸು ಮತ್ತು ಲಾಜಿಸ್ಟಿಕ್ಸ್ ನಿರ್ವಹಣೆಯಲ್ಲಿ ಪರಿಣತಿ ಹೊಂದಿದ್ದಾರೆ
  • ಪಕ್ಷದ ಕಾರ್ಯಗಳಿಗೆ ಅಗತ್ಯವಾದ ಸಂಪನ್ಮೂಲಗಳನ್ನು ಒದಗಿಸುವ ಸಾಮರ್ಥ್ಯ ಕೂಡ ಹೊಂದಿದ್ದಾರೆ
  •  ಇದರಿಂದ ದೊಡ್ಡ ಮಟ್ಟದ ಕ್ಯಾಂಪೇನ್‌ಗಳನ್ನು ಸುಲಭವಾಗಿ ನಡೆಸಬಹುದು ಇದರಿಂದ ಉತ್ತೇಜನ ಕೂಡ ಸಿಗುತ್ತದೆ.

DK ಶಿವಕುಮಾರ್ ಅವರ ಚುನಾವಣಾ ತಂತ್ರ 

ಕ್ಷೇತ್ರವಾರು ವಿಶ್ಲೇಷಣೆ ಮಾಡಿ ಅಭ್ಯರ್ಥಿ ಆಯ್ಕೆ ಮಾಡುತ್ತಾರೆ

caste/community equations ಅನ್ನು ಗಮನದಲ್ಲಿಡುವುದು ಇವರ ಮುಖ್ಯ ಶಕ್ತಿ

ಸ್ಥಳೀಯ ಸಮಸ್ಯೆಗಳ ಮೇಲೆ ಕ್ಯಾಂಪೇನ್ ಫೋಕಸ್ ಮಾಡಿ ಪರಿಹಾರ ನೀಡುವತ್ತ ಗಮನ ಹರಿಸುತ್ತಾರೆ ಹಾಗಾಗಿ ಇದರಿಂದ ಗೆಲುವಿನ ಸಾಧ್ಯತೆ ಹೆಚ್ಚುತ್ತದೆ.

ಪಕ್ಷದ ಹೈಕಮಾಂಡ್‌ಗೆ ನಿಷ್ಠೆಯನ್ನು ಇವರು ಪಡೆದಿದ್ದಾರೆ ನಾಯಕತ್ವದ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿ ಉಳಿದಿದ್ದಾರೆ.ಇದರಿಂದ ಪಕ್ಷದಲ್ಲಿ ಪ್ರಮುಖ ಸ್ಥಾನ ಸಿಕ್ಕಿದೆ ಇವರ ಪ್ರಯತ್ನಕ್ಕೆ.

ಇವರು ಭರ್ಜರಿ ಪ್ರಚಾರ ಸಭೆಗಳನ್ನು ಕೈಗೊಳ್ಳುತ್ತ ನೇರವಾಗಿ ಜನರೊಂದಿಗೆ ಸಂವಹನ ನಡೆಸುತ್ತಾರೆ ಇದು ಜನರನ್ನ ತಲುಪಲು ಸಾಹಕಾರಿಯಾಗಿದೆ.ಮೀಡಿಯಾ ಬಳಸುವಲ್ಲಿ ಚಾತುರ್ಯ ಹೊಂದಿದ್ದಾರೆ.

ಸಂಕಷ್ಟ ನಿರ್ವಹಣೆ ಮಾಡುವುದಲ್ಲಿ ಮುಂದು 

2019ರಲ್ಲಿ ಸರ್ಕಾರ ಬಿಕ್ಕಟ್ಟು ಸಮಯದಲ್ಲಿ ಶಾಸಕರನ್ನು ಒಗ್ಗೂಡಿಸಲು ಪ್ರಯತ್ನ

ಕಠಿಣ ಸಂದರ್ಭಗಳಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳುವ ಗುಣ

ಇದರಿಂದ “troubleshooter” ಎಂಬ ಹೆಸರನ್ನು ಪಡೆದಿದ್ದಾರೆ.

DK ಶಿವಕುಮಾರ್ ಪ್ರಮುಖ ಘಟನೆಗಳು & ವಿವಾದಗಳು

2017ರಲ್ಲಿ IT (Income Tax) ದಾಳಿ ನಡೆದಿತ್ತು

2019ರಲ್ಲಿ Enforcement Directorate ಬಂಧನ (money laundering ಪ್ರಕರಣ)

ಕೆಲವು ಕಾನೂನು ಪ್ರಕರಣಗಳು ಇದ್ದರೂ ನಂತರ ಜಾಮೀನು ಪಡೆದಿದ್ದರು.

ಯಾವ ಸಚಿವ ಸ್ಥಾನಗಳನ್ನು ಅವರು ನಿರ್ವಹಿಸಿದ್ದಾರೆ.

ಶಕ್ತಿ ಸಚಿವ (Energy Minister) ಮತ್ತು

ಜಲ ಸಂಪನ್ಮೂಲ ಸಚಿವ (Water Resources Minister)

ಬೆಂಗಳೂರು ಅಭಿವೃದ್ಧಿ ಸಚಿವ ಹಾಗೂ ಪ್ರಸ್ತುತ ಉಪಮುಖ್ಯಮಂತ್ರಿ ಹುದ್ದೆ.

ರಾಜಕೀಯ ಬೆಳವಣಿಗೆ

1989ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ

ಕನಕಪುರ ಕ್ಷೇತ್ರದಿಂದ ಹಲವಾರು ಬಾರಿ ಗೆಲುವು

Indian National Congress ನಲ್ಲಿ ಪ್ರಮುಖ ನಾಯಕ

2020ರಲ್ಲಿ Karnataka Pradesh Congress Committee ಅಧ್ಯಕ್ಷರಾದರು.ಕರ್ನಾಟಕ ಕಾಂಗ್ರೆಸ್‌ನ್ನು ಪುನರ್‌ ಸಂಘಟಿಸಲು ಪ್ರಮುಖ ಪಾತ್ರ ವಹಿಸಿದರು.

Leave a Comment