Telegram Join My Telegram   WhatsApp Join My WhatsApp

RBI Recruitment 2026: 650 ಸಹಾಯಕ ಹುದ್ದೆಗಳ ನೇಮಕಾತಿ!

ಭಾರತದ ಕೇಂದ್ರ ಬ್ಯಾಂಕ್ ಆಗಿರುವ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ಇಂಡಿಯಾ (RBI) 2026ನೇ ಸಾಲಿನ ಸಹಾಯಕ (Assistant) ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಕಾಯುತ್ತ ಕುಳಿತಿದ್ದ ಹಾಗೂ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ದೇಶದ ವಿವಿಧ ಕಚೇರಿಗಳಲ್ಲಿ ಒಟ್ಟು 650 ಸಹಾಯಕ ಹುದ್ದೆಗಳು ಖಾಲಿಯಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಅಲ್ಲದೆ ಇದು ಸಮಾಜದಲ್ಲಿ ಉತ್ತಮ ವೇತನ, ಗೌರವಯುತ ಹುದ್ದೆ ಮತ್ತು ಭದ್ರ ಭವಿಷ್ಯಕ್ಕಾಗಿ RBI ಉದ್ಯೋಗ ಅತ್ಯಂತ ಬೇಡಿಕೆಯಲ್ಲಿದೆ.

ಅಭ್ಯರ್ಥಿಗಳು RBI ನ ಅಧಿಕೃತ ವೆಬ್‌ಸೈಟ್ನಲ್ಲಿ https://rbi.org.in ಅರ್ಜಿ ಸಲ್ಲಿಸಬೇಕು. ಈಗಾಗಲೇ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಮಾರ್ಚ್ 8, 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಕೊನೆಯ ದಿನಾಂಕದ ನಂತರ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಆಸಕ್ತರು ವಿಳಂಬ ಮಾಡದೇ ತಕ್ಷಣವೇ ಅರ್ಜಿ ಸಲ್ಲಿಸುವುದು ಉತ್ತಮ.

ಪರೀಕ್ಷಾ ವೇಳಾಪಟ್ಟಿ

RBI ಸಹಾಯಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮೂರು ಹಂತಗಳಲ್ಲಿ ನಡೆಯಲಿದೆ. ಪ್ರಮುಖ ದಿನಾಂಕಗಳು ಹೀಗಿವೆ:

  •  ಪ್ರಾಥಮಿಕ ಪರೀಕ್ಷೆ (Preliminary Exam): ಏಪ್ರಿಲ್ 11, 2026
  •  ಮುಖ್ಯ ಪರೀಕ್ಷೆ (Main Exam): ಜೂನ್ 7, 2026

ಪ್ರಾಥಮಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಮುಖ್ಯ ಪರೀಕ್ಷೆಗೆ ಹಾಜರಾಗುವ ಅವಕಾಶ ನೀಡಲಾಗುತ್ತದೆ. ಮುಖ್ಯ ಪರೀಕ್ಷೆಯಲ್ಲಿ ತಾತ್ಕಾಲಿಕವಾಗಿ ಆಯ್ಕೆಯಾದವರು ಭಾಷಾ ಪ್ರಾವೀಣ್ಯತೆ ಪರೀಕ್ಷೆಗೆ ಒಳಗಾಗಬೇಕು.

ಅಗತ್ಯ ಶೈಕ್ಷಣಿಕ ಅರ್ಹತೆ

RBI ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು:

ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ 50% ಅಂಕಗಳೊಂದಿಗೆ ಪದವಿ ಪಡೆದಿರಬೇಕು.

SC/ST/PwBD ವರ್ಗದ ಅಭ್ಯರ್ಥಿಗಳಿಗೆ ಪಾಸ್ ಕ್ಲಾಸ್ ಸಾಕು.

ಕಂಪ್ಯೂಟರ್‌ನಲ್ಲಿ ವರ್ಡ್ ಪ್ರೊಸೆಸಿಂಗ್ ಜ್ಞಾನ ಕಡ್ಡಾಯವಾಗಿದೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ದಿನನಿತ್ಯದ ಕಾರ್ಯಗಳಲ್ಲಿ ಕಂಪ್ಯೂಟರ್ ಬಳಕೆ ಹೆಚ್ಚಾಗಿರುವುದರಿಂದ ಮೂಲಭೂತ ಕಂಪ್ಯೂಟರ್ ಜ್ಞಾನ ಅತ್ಯಗತ್ಯವಾಗಿದೆ.

ವಯೋಮಿತಿ ವಿವರ

ಕನಿಷ್ಠ ವಯಸ್ಸು: 20 ವರ್ಷ

ಗರಿಷ್ಠ ವಯಸ್ಸು: 28 ವರ್ಷ

02 ಫೆಬ್ರವರಿ 1998 ಕ್ಕಿಂತ ಮೊದಲು ಮತ್ತು 01 ಫೆಬ್ರವರಿ 2006 ರ ನಂತರ (ಎರಡೂ ದಿನಗಳು ಸೇರಿದಂತೆ) ಜನಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ನಿಯಮಾನುಸಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯವಿರುತ್ತದೆ.

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

RBI ನೇಮಕಾತಿ ಪ್ರಕ್ರಿಯೆ ಮೂರು ಹಂತಗಳನ್ನು ಒಳಗೊಂಡಿರುತ್ತದೆ:

 ಪ್ರಾಥಮಿಕ ಪರೀಕ್ಷೆ

ಒಟ್ಟು 100 ಪ್ರಶ್ನೆಗಳು

100 ಅಂಕಗಳು

ಅವಧಿ: 60 ನಿಮಿಷಗಳು

ಈ ಹಂತದಲ್ಲಿ ಸಾಮಾನ್ಯ ಜ್ಞಾನ, ಗಣಿತ, ಇಂಗ್ಲಿಷ್ ಭಾಷೆ ಮತ್ತು ತಾರ್ಕಿಕ ಚಿಂತನೆಗೆ ಸಂಬಂಧಿಸಿದ ಪ್ರಶ್ನೆಗಳು ಕೇಳಲಾಗುತ್ತವೆ. ಪ್ರತಿಯೊಂದು ಪ್ರಶ್ನೆಗೆ ಸಮಾನ ಅಂಕಗಳು ಲಭ್ಯವಿರುತ್ತವೆ.

ಮುಖ್ಯ ಪರೀಕ್ಷೆ

ಒಟ್ಟು 200 ಪ್ರಶ್ನೆಗಳು

200 ಅಂಕಗಳು

ಅವಧಿ: 135 ನಿಮಿಷಗಳು

ಮುಖ್ಯ ಪರೀಕ್ಷೆಯಲ್ಲಿ ಹೆಚ್ಚು ಆಳವಾದ ಮತ್ತು ವಿಶ್ಲೇಷಣಾತ್ಮಕ ಪ್ರಶ್ನೆಗಳು ಕೇಳಲಾಗುತ್ತವೆ. ಪ್ರತಿಯೊಂದು ವಿಭಾಗದಲ್ಲೂ ಪ್ರತ್ಯೇಕವಾಗಿ ಅರ್ಹತೆ ಪಡೆಯುವುದು ಕಡ್ಡಾಯ. ಒಟ್ಟಾರೆ ಮೆರಿಟ್ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಆರ್ ಬಿ ಐ ನೋಟಿಫಿಕೇಶನ್ ನ ಹೇಗೆ ನೀಡುತ್ತದೆ 

RBI ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಮಾಡುತ್ತದೆ.

ಸುದ್ದಿ ಪತ್ರಿಕೆಯಲ್ಲೂ ಕೂಡ ಪ್ರಕಟವಾಗಬಹುದು  ನಲ್ಲಿ ಕೂಡ ಪ್ರಕಟವಾಗಬಹುದು

ಭಾಷಾ ಪ್ರಾವೀಣ್ಯತೆ ಪರೀಕ್ಷೆ (LPT)

ಮುಖ್ಯ ಪರೀಕ್ಷೆಯಲ್ಲಿ ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ರಾಜ್ಯದ ಅಧಿಕೃತ ಅಥವಾ ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಸ್ಥಳೀಯ ಭಾಷೆಯಲ್ಲಿ ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು. ಈ ಹಂತದಲ್ಲಿ ಅರ್ಹತೆ ಪಡೆಯದಿದ್ದರೆ ಅಂತಿಮ ಆಯ್ಕೆ ರದ್ದಾಗಬಹುದು.

ಅರ್ಜಿ ಶುಲ್ಕ

  • SC/ST/PwBD/EXS ವರ್ಗ: ₹50 + 18% GST
  • ಸಾಮಾನ್ಯ/OBC/EWS ವರ್ಗ: ₹450 + 18% GST

ಪಾವತಿ ಆನ್‌ಲೈನ್ ಮೂಲಕ ಮಾತ್ರ ಸ್ವೀಕರಿಸಲಾಗುತ್ತದೆ. ಅರ್ಜಿ ಸಲ್ಲಿಸುವಾಗ ಸರಿಯಾದ ಮಾಹಿತಿಯನ್ನು ನಮೂದಿಸುವುದು ಅತ್ಯಂತ ಮುಖ್ಯ. ತಪ್ಪು ಮಾಹಿತಿ ನೀಡಿದರೆ ಅರ್ಜಿ ತಿರಸ್ಕರಿಸುವ ಸಾಧ್ಯತೆ ಇದೆ.

RBI ಉದ್ಯೋಗದ ವಿಶೇಷತೆ ಏನು?

Reserve Bank of India ನಲ್ಲಿ ಕೆಲಸ ಮಾಡುವುದು ದೇಶದ ಪ್ರಮುಖ ಹಣಕಾಸು ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಗೌರವದ ವಿಷಯ. ಉತ್ತಮ ವೇತನ, ಉದ್ಯೋಗ ಭದ್ರತೆ, ನಿವೃತ್ತಿ ಸೌಲಭ್ಯಗಳು, ವೈದ್ಯಕೀಯ ಸೌಲಭ್ಯಗಳು ಹಾಗೂ ಉತ್ತಮ ಪದೋನ್ನತಿ ಅವಕಾಶಗಳು ದೊರೆಯುತ್ತವೆ.

ಸಹಾಯಕ ಹುದ್ದೆಯಲ್ಲಿ ಪ್ರಾರಂಭಿಕ ವೇತನದೊಂದಿಗೆ ವಿವಿಧ ಭತ್ಯೆಗಳು ಲಭ್ಯವಿದ್ದು, ಕೆಲಸದ ಅನುಭವದೊಂದಿಗೆ ವೇತನವೂ ಹೆಚ್ಚುತ್ತದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೀರ್ಘಕಾಲಿಕ ಹಾಗೂ ಸ್ಥಿರ ಉದ್ಯೋಗ ಬಯಸುವವರಿಗೆ RBI ಅತ್ಯುತ್ತಮ ಆಯ್ಕೆಯಾಗಿದೆ.

ಅಭ್ಯರ್ಥಿಗಳಿಗೆ ಪ್ರಮುಖ ಸಲಹೆಗಳು

ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳಿ

ಅಗತ್ಯ ದಾಖಲೆಗಳನ್ನು (ಪದವಿ ಪ್ರಮಾಣಪತ್ರ, ಫೋಟೋ, ಸಹಿ, ಇತ್ಯಾದಿ) ಸಿದ್ಧವಾಗಿಟ್ಟುಕೊಳ್ಳಿ.

ಕೊನೆಯ ದಿನಾಂಕದವರೆಗೆ ಕಾಯಬೇಡಿ ಸರ್ವರ್ ನೆಟ್ವರ್ಕ್ ಇಶ್ಯೂ ಸಮಸ್ಯೆಗಳು ಬರಬಹುದು

ಪರೀಕ್ಷಾ ತಯಾರಿ ಈಗಲೇ ಆರಂಭ ಮಾಡಿರಿ.

ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಿ.

ಸ್ಪರ್ಧಾತ್ಮಕ ಪರೀಕ್ಷೆಯಾಗಿರುವುದರಿಂದ ಸಮರ್ಪಕ ತಯಾರಿ ಮತ್ತು ಸಮಯ ನಿರ್ವಹಣೆ ಬಹಳ ಮುಖ್ಯ. ದಿನನಿತ್ಯ ಅಧ್ಯಯನ ಯೋಜನೆ ರೂಪಿಸಿ ನಿಯಮಿತವಾಗಿ ಅಭ್ಯಾಸ ಮಾಡಿದರೆ ಯಶಸ್ಸು ಸಾಧ್ಯ.

ಆರ್‌ಬಿಯ ನೇಮಕಾತಿ ಮಾಡುವವರು ಯಾರು 

RBI ನೇಮಕಾತಿ ನೇರವಾಗಿ RBI ಸಂಸ್ಥೆಯೇ ಹೊರಡಿಸುತ್ತದೆ

ಯಾವುದೇ Union Public Service Commission (UPSC) ಮೂಲಕ ಮಾಡುವುದಿಲ್ಲ ಎಂಬುದು ವಿಶೇಷ

ಯಾವುದೇ Staff Selection Commission (SSC) ಮೂಲಕ ಕೂಡ ಮಾಡುವುದಿಲ್ಲ

ಸ್ವತಂತ್ರವಾಗಿ RBI Recruitment ಆಯ್ಕೆ ಅಧಿಸೂಚನೆಯ ಮೂಲಕ ಮಾಡಲಾಗುತ್ತದೆ.

RBI ಸಹಾಯಕ ನೇಮಕಾತಿ 2026

RBI ನಂತಹ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವಂತ ಉದ್ಯೋಗಿಗಳಿಗೆ ಇದೊಂದು ಸುವರ್ಣ ಅವಕಾಶ ಲಭಿಸಿದೆ. ದೇಶದ ಕೇಂದ್ರ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಸ್ಪರ್ಧೆ ಹೆಚ್ಚು ಇರುವುದರಿಂದ ಶ್ರದ್ಧೆ, ಪರಿಶ್ರಮ ಮತ್ತು ಸರಿಯಾದ ತಯಾರಿಯೊಂದಿಗೆ ಮುಂದುವರಿದರೆ ಯಶಸ್ಸು ನಿಮ್ಮದಾಗುತ್ತದೆ.

ಆಸಕ್ತ ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಿ ತಮ್ಮ ಕನಸಿನ ಉದ್ಯೋಗದತ್ತ ಮೊದಲ ಹೆಜ್ಜೆ ಇಡಿ.ಆದಷ್ಟು ಬೇಗ ಅಭ್ಯಾಸ ನಡೆಸಿ.

ಯಾವೆಲ್ಲ ಸೌಲಭ್ಯಗಳು ಸಿಗುತ್ತವೆ 

ಉತ್ತಮ ವೇತನ: ಆರ್ ಬಿ ಐ ನಲ್ಲಿ ಉದ್ಯೋಗ ಮಾಡುವವರಿಗೆ ಉತ್ತಮ ಗುಣಮಟ್ಟದ ಸಂಬಳ ಸಿಗುತ್ತದೆ. ಹಾಗೂ ದರ್ಜೆಗೆ ಅನುಗುಣವಾಗಿ ಸಂಬಳವನ್ನು ನಿಗದಿ ಮಾಡಲಾಗುತ್ತದೆ. ಹಾಗೂ ಪ್ರತಿ ವರ್ಷ ಕೂಡ ಇದನ್ನ ಹೆಚ್ಚಿಸಲಾಗುತ್ತದೆ.

ವಸತಿ ಸೌಲಭ್ಯ: ಆರ್ ಬಿ ಐ ನ ಉದ್ಯೋಗಿಗಳಿಗೆ ಕ್ವಾಟ್ರಸ್  ಸೌಲಭ್ಯ ಕೂಡ ಸಿಗುತ್ತದೆ. ಹಾಗೂ ಇದರ ಹಣ ಸಂಬಳದಲ್ಲಿ ಕಡಿತಗೊಳ್ಳುತ್ತದೆ.

ವೈದ್ಯಕೀಯ ಸೌಲಭ್ಯ: ಆರ್ಗನ ಉದ್ಯೋಗಿಗೆ ಹಾಗೂ ಉದ್ಯೋಗಿಯ ಕುಟುಂಬದವರಿಗೆ ಉಚಿತವಾಗಿ ಮೆಡಿಕಲ್ ಸೌಲಭ್ಯ ಸಿಗುತ್ತದೆ ಹಾಗೂ ಇದರ ಖರ್ಚು ವೆಚ್ಚವನ್ನು ಸಂಪೂರ್ಣವಾಗಿ ಆರ್ ಬಿ ಐ ಭರಿಸುತ್ತದೆ. ಕೆಲವೊಮ್ಮೆ ಧೀರ್ಘಾವಧಿವರೆಗೂ ಕೂಡ ಆರ್‌ಬಿಐನಿಂದ ವೈದ್ಯಕೀಯ ಸೌಲಭ್ಯ ದೊರಕಬಹುದು.

ಶಿಕ್ಷಣ ಮತ್ತು ತರಬೇತಿ :  ಆರ್‌ಬಿಐ ತರಬೇತಿಯನ್ನು ಕೂಡ ನೀಡುತ್ತದೆ. ವಿದೇಶದಲ್ಲೂ ಕೂಡ ಟ್ರೈನಿಂಗ್ ನೀಡುವ ವ್ಯವಸ್ಥೆಯನ್ನು ಕೂಡ ಹೊಂದಿದೆ.

Leave Travel Concession (LTC):  ಕುಟುಂಬದ ಜೊತೆ ಪ್ರಯಾಣ ಮಾಡೋದು ಹಣದ ಸಹಾಯ ಕೂಡ ನೀಡುತ್ತದೆ, ಭಾರತದಲ್ಲಿ ಹಾಗೂ ಭಾರತದ ಹೊರಗೆ ಕೂಡ ಈ ವ್ಯವಸ್ಥೆಯನ್ನು ಇದು ಕಲ್ಪಿಸಬಹುದು.

ಕೆಲಸದ ಸಮಯ: ಎಲ್ಲಿ ನಿಗದಿತ ಸಮಯವಿದ್ದು ಖಾಸಗಿ ಕಂಪನಿಗಳಿಗೆ ಹೋಲಿಕೆ ಮಾಡಿದರೆ ಇಲ್ಲಿ ಅತಿ ಕಡಿಮೆ ಹಾಗೂ ಕೆಲಸ ಇರುತ್ತದೆ. ಹಾಗೂ ವಾರಂತ್ಯದಲ್ಲಿ ರಜಾ ಕೂಡ ಇರುತ್ತದೆ.

ಪಿಂಚಣಿ & PF (Retirement Benefits): ಕೆಲಸದ ನಂತರವೂ ಕೂಡ ಪಿಂಚಣಿ ಸಿಗುತ್ತದೆ. ಅಂದರೆ ನಿವೃತ್ತಿ ವೇತನವನ್ನು ಇಲ್ಲಿ ಪಡೆಯಬಹುದಾಗಿದೆ.

RBI ಇತಿಹಾಸ :

ರಿಸರ್ವ ಬ್ಯಾಂಕ್ ಆಫ್ ಇಂಡಿಯಾ 1935 ಏಪ್ರಿಲ್ ಒಂದರಂದು ಸ್ಥಾಪಿಸಲಾಗುತ್ತದೆ.ಈ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 1934ರ ಕಾಯ್ದೆಯ ಮೇರೆಗೆ ಸ್ಥಾಪನೆ ಆಯಿತು.

ಈ ಬ್ಯಾಂಕ್ ಆರಂಭವಾದ ಪ್ರಾರಂಭದಲ್ಲಿ ಬ್ರಿಟಿಷರ ಆಡಳಿತಕ್ಕೆ ಒಳಗಾಗಿತ್ತು ಅಲ್ಲವೇ ಇದು ಖಾಸಗಿ ಬ್ಯಾಂಕ್ ಆಗಿದ್ದು ಇದರ ಸಂಪೂರ್ಣ ಆಡಳಿತವನ್ನು ಬ್ರಿಟಿಷರು ನಿರ್ವಹಿಸುತ್ತಿದ್ದರು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಮುಖ ಉದ್ದೇಶವೆಂದರೆ ಭಾರತದಲ್ಲಿ ಹಣಕಾಸು ವ್ಯವಸ್ಥೆಯನ್ನು ನಿಯಂತ್ರಿಸುವುದು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರಾಷ್ಟ್ರೀಕೃತ ಗೊಂಡಿದ್ದು ಯಾವಾಗ 

1949 ಜನವರಿ 1ರಂದು RBI ಅನ್ನು ರಾಷ್ಟ್ರೀಕರಿಸಲಾಯಿತು.

ಈಗ ಇದು ಸಂಪೂರ್ಣವಾಗಿ ಭಾರತ ಸರ್ಕಾರದ ನಿಯಂತ್ರಣದಲ್ಲಿಯೆ ಇದೆ.

ಈ ಮೂಲಕ RBI ಒಂದು ಸರ್ಕಾರಿ ಕೇಂದ್ರ ಬ್ಯಾಂಕ್ ಆಗಿ ಮಾರ್ಪಟ್ಟಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ನ ಪ್ರಮುಖ ಕಾರ್ಯಗಳು 

RBI ಭಾರತದ ಕೇಂದ್ರ ಬ್ಯಾಂಕ್ ಆಗಿ ಈ ಕೆಲಸಗಳನ್ನು ಮಾಡುತ್ತದೆ:

ಹಣ ಮುದ್ರಣೆ (Currency Issue) ಮಾಡುತ್ತದೆ

ಬ್ಯಾಂಕ್‌ಗಳ ನಿಯಂತ್ರಣ (Bank Regulation) ಮಾಡುತ್ತದೆ

ಹಣದುಬ್ಬರ ನಿಯಂತ್ರಣ (Inflation Control) ಮಾಡುವುದು ಇದರ ಮತ್ತೊಂದು ವಿಶೇಷ ಕಾರ್ಯ

ಸರ್ಕಾರದ ಬ್ಯಾಂಕರ್ ಆಗಿ ಕೆಲಸ ಮಾಡುವುದರ ಜೊತೆ ಇದು Monetary Policy ರೂಪಿಸುತ್ತದೆ.

 

Leave a Comment