Telegram Join My Telegram   WhatsApp Join My WhatsApp

ಭಾರತೀಯ ನೌಕಾಪಡೆಯಲ್ಲಿ 260 ಸಬ್ ಲೆಫ್ಟಿನೆಂಟ್ ಹುದ್ದೆಗಳು; ಲಿಖಿತ ಪರೀಕ್ಷೆಯಿಲ್ಲದೆ ನೇರ ಆಯ್ಕೆ

ದೇಶ ಸೇವೆ ಮಾಡಬೇಕೆಂಬುದು ಪ್ರತಿಯೊಬ್ಬ ಭಾರತೀಯನ ಕನಸಾಗಿರುತ್ತದೆ ಅದಕ್ಕೆ ಒಂದು ಸಣ್ಣ ಅವಕಾಶ ಮಾಡಿಕೊಳ್ಳಲು ಭಾರತದ ಯುವ ಸಮುದಾಯ ಸದಾ ಒಂದಲ್ಲೊಂದು ರೀತಿಯಲ್ಲಿ ಪ್ರಯತ್ನ ಪಡುತ್ತಲೇ ಇರುತ್ತದೆ.

ಏಕೆಂದರೆ ದೇಶ ಸೇವೆ ಮಾಡುವ ಭಾಗ್ಯ ಪ್ರತಿಯೊಬ್ಬರಿಗೂ ಕೂಡ ಸಿಗುವುದಿಲ್ಲ ಇಂತಹ ಸಂದರ್ಭದಲ್ಲಿ ದೇಶ ಸೇವೆಯನ್ನ ಮಾಡಲು ಅಥವಾ ಕನಸನ್ನ ಕಾಣುತ್ತಿರುವವರಿಗೆ ಇಲ್ಲೊಂದು ಸಣ್ಣ ಬೆಳಕಿನ ಕಿಡಿ ಕಾಣುತ್ತಿದೆ.

ದೇಶ ಸೇವೆಯ ಕನಸನ್ನು ಹೃದಯದಲ್ಲಿ ಹೊತ್ತಿರುವ ಸಾವಿರಾರು ಯುವಕರಿಗೆ ಇದೀಗ ಮಹತ್ವದ ಅವಕಾಶ ಬಂದಿದೆ. ಸಮುದ್ರದ ಗರ್ಭದಲ್ಲಿ ದೇಶದ ಗಡಿಗಳನ್ನು ಕಾಪಾಡುವ ಸೈನಿಕ ಪಡೆಗಳಲ್ಲಿ ಒಂದಾದ Indian Navyಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಬಯಸುವವರಿಗೆ ಶಾರ್ಟ್ ಸರ್ವಿಸ್ ಕಮಿಷನ್ (SSC) ಅಡಿಯಲ್ಲಿ 260 ಸಬ್ ಲೆಫ್ಟಿನೆಂಟ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ವಿಶೇಷ ಅಂಶವೆಂದರೆ, ಈ ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಇಲ್ಲ. ಶೈಕ್ಷಣಿಕ ಮೆರಿಟ್ ಮತ್ತು SSB ಸಂದರ್ಶನದ ಆಧಾರದ ಮೇಲೆ ನೇರವಾಗಿ ಆಯ್ಕೆ ನಡೆಯಲಿದೆ.

ಸರ್ಕಾರಿ ಉದ್ಯೋಗದೊಂದಿಗೆ ಗೌರವಯುತ ಜೀವನಶೈಲಿ, ಉತ್ತಮ ವೇತನ ಮತ್ತು ಸಾಹಸಮಯ ವೃತ್ತಿಜೀವನವನ್ನು ಬಯಸುವವರಿಗೆ ಇದು ಅಪರೂಪದ ಅವಕಾಶವೆಂದೇ ಹೇಳಬಹುದು. ಸಮಾಜದಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಘನತೆಯನ್ನು ಈ ಉದ್ಯೋಗಗಳು ತಂದು ಕೊಡುವುದರಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತವೆ.

ಯಾವ ಯಾವ ಶಾಖೆಗಳಲ್ಲಿ ಅವಕಾಶ?

ಈ ನೇಮಕಾತಿ ಕಾರ್ಯನಿರ್ವಾಹಕ (Executive), ತಾಂತ್ರಿಕ (Technical), ಶಿಕ್ಷಣ (Education) ಮತ್ತು ಲಾಜಿಸ್ಟಿಕ್ಸ್ (Logistics) ವಿಭಾಗಗಳಲ್ಲಿ ನಡೆಯಲಿದೆ. ಅರ್ಹ ಅವಿವಾಹಿತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಕೇರಳದ ಎಜಿಮಲದಲ್ಲಿರುವ ಭಾರತೀಯ ನೌಕಾ ಅಕಾಡೆಮಿಯಲ್ಲಿ 22 ವಾರಗಳ ಗಟ್ಟಿಯಾದ ತರಬೇತಿ ನೀಡಲಾಗುತ್ತದೆ. ಈ ತರಬೇತಿ ಅವಧಿಯಲ್ಲಿ ಶಿಸ್ತು, ನಾಯಕತ್ವ ಗುಣ, ತಾಂತ್ರಿಕ ಜ್ಞಾನ ಮತ್ತು ದೈಹಿಕ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.

ಹುದ್ದೆಗಳ ವಿವರ

ಯಾವ ಯಾವ ಇಲಾಖೆಗಳಲ್ಲಿ ಎಷ್ಟು ಹುದ್ದೆಗಳನ್ನು ನೀಡಲಾಗಿದೆ ಎಂಬುದನ್ನ ಈ ಕೆಳಕಂಡಂತೆ ಸವಿಸ್ತಾರವಾಗಿ ತಿಳಿಸಲಾಗಿದೆ

ಕಾರ್ಯನಿರ್ವಾಹಕ ಶಾಖೆ

ಸಾಮಾನ್ಯ ಸೇವೆ (76 ಹುದ್ದೆಗಳು), ಪೈಲಟ್ (25), ಏರ್ ಟ್ರಾಫಿಕ್ ಕಂಟ್ರೋಲರ್ (18) ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅವಕಾಶಗಳಿವೆ. ಈ ಹುದ್ದೆಗಳಿಗೆ ಸಂಬಂಧಿತ ವಿಷಯದಲ್ಲಿ ಬಿ.ಇ/ಬಿ.ಟೆಕ್ ಪದವಿಯಲ್ಲಿ ಕನಿಷ್ಠ 60% ಅಂಕಗಳನ್ನು ಹೊಂದಿರಬೇಕು. ಪೈಲಟ್ ಮತ್ತು ಏರ್ ಟ್ರಾಫಿಕ್ ಕಂಟ್ರೋಲರ್ ಹುದ್ದೆಗಳು ವಿಶೇಷ ಹೊಣೆಗಾರಿಕೆಯನ್ನು ಹೊಂದಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ತರಬೇತಿ ನೀಡಲಾಗುತ್ತದೆ.

ತಾಂತ್ರಿಕ ಶಾಖೆ

ಎಂಜಿನಿಯರಿಂಗ್ (42) ಮತ್ತು ಎಲೆಕ್ಟ್ರಿಕಲ್ (38) ವಿಭಾಗಗಳಲ್ಲಿ ಹುದ್ದೆಗಳಿವೆ. ಜಲಾಂತರ್ಗಾಮಿ (Submarine) ವಿಭಾಗದಲ್ಲೂ ವಿಶೇಷ ಅವಕಾಶಗಳಿವೆ. ಸಮುದ್ರದ ಒಳಗಡೆ ಕಾರ್ಯನಿರ್ವಹಿಸುವ ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿದವರಿಗೆ ಇದು ವಿಶಿಷ್ಟ ಅವಕಾಶ. ತಾಂತ್ರಿಕ ಜ್ಞಾನ, ತ್ವರಿತ ನಿರ್ಧಾರ ಸಾಮರ್ಥ್ಯ ಮತ್ತು ತಂಡದೊಂದಿಗೆ ಕೆಲಸ ಮಾಡುವ ಮನೋಭಾವ ಅಗತ್ಯ.

ಶಿಕ್ಷಣ ಮತ್ತು ಲಾಜಿಸ್ಟಿಕ್ಸ್

ಎಂ.ಎಸ್ಸಿ, ಎಂ.ಬಿ.ಎ, ಎಂ.ಸಿ.ಎ ಅಥವಾ ಬಿ.ಕಾಂ ಜೊತೆಗೆ ಲಾಜಿಸ್ಟಿಕ್ಸ್ ಡಿಪ್ಲೊಮಾ ಪಡೆದ ಅಭ್ಯರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ನೌಕಾಪಡೆಯ ಕಾರ್ಯಾಚರಣೆಗಳಲ್ಲಿ ಲಾಜಿಸ್ಟಿಕ್ಸ್ ಮತ್ತು ಶಿಕ್ಷಣ ವಿಭಾಗಗಳು ಪ್ರಮುಖ ಪಾತ್ರ ವಹಿಸುತ್ತವೆ.

ಆಯ್ಕೆ ಪ್ರಕ್ರಿಯೆ ಹೇಗೆ?

ಈ ನೇಮಕಾತಿಯ ಪ್ರಮುಖ ಆಕರ್ಷಣೆಯೇ ಲಿಖಿತ ಪರೀಕ್ಷೆಯಿಲ್ಲದಿರುವುದು.

ಮೆರಿಟ್ ಆಧಾರಿತ ಶಾರ್ಟ್‌ಲಿಸ್ಟಿಂಗ್: ಅಭ್ಯರ್ಥಿಗಳ ಪದವಿ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ. NCC ‘C’ ಪ್ರಮಾಣಪತ್ರ ಹೊಂದಿರುವವರಿಗೆ 5% ಹೆಚ್ಚುವರಿ ಅಂಕಗಳ ಸಡಿಲಿಕೆ ದೊರೆಯುತ್ತದೆ.

  •  SSB ಸಂದರ್ಶನ: ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ಬೆಂಗಳೂರು, ಭೋಪಾಲ್, ವಿಶಾಖಪಟ್ಟಣಂ ಅಥವಾ ಕೋಲ್ಕತ್ತಾದಲ್ಲಿ SSB ಸಂದರ್ಶನ ನಡೆಯಲಿದೆ. ಈ ಸಂದರ್ಶನದಲ್ಲಿ ವ್ಯಕ್ತಿತ್ವ, ನಾಯಕತ್ವ ಗುಣ, ಮಾನಸಿಕ ಸ್ಥೈರ್ಯ ಮತ್ತು ತಂಡದೊಂದಿಗೆ ಹೊಂದಾಣಿಕೆ ಪರೀಕ್ಷಿಸಲಾಗುತ್ತದೆ.
  •  ವೈದ್ಯಕೀಯ ಪರೀಕ್ಷೆ: ಸಂದರ್ಶನದಲ್ಲಿ ಉತ್ತೀರ್ಣರಾದವರಿಗೆ ಅಂತಿಮವಾಗಿ ದೈಹಿಕ ಮತ್ತು ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ.

ವೇತನ ಮತ್ತು ಸೌಲಭ್ಯಗಳು

ನೌಕಾಪಡೆಯಲ್ಲಿ ಅಧಿಕಾರಿಯಾಗಿ ಸೇರುವುದು ಕೇವಲ ಒಂದು ಉದ್ಯೋಗವಲ್ಲ, ಅದು ಒಂದು ಗೌರವಯುತ ಜೀವನಶೈಲಿ. ಲೆವೆಲ್-10 ವೇತನ ಶ್ರೇಣಿಯ ಅಡಿಯಲ್ಲಿ ಪ್ರಾರಂಭಿಕ ಮೂಲ ವೇತನ ರೂ. 56,100 ಆಗಿರುತ್ತದೆ. ಇದಕ್ಕೆ ತುಟ್ಟಿಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA) ಮತ್ತು ಇತರ ಸೈನಿಕ ಸೌಲಭ್ಯಗಳನ್ನು ಸೇರಿಸಿದರೆ ಮಾಸಿಕವಾಗಿ ಅಂದಾಜು ರೂ. 1.25 ಲಕ್ಷದವರೆಗೆ ವೇತನ ದೊರೆಯುವ ಸಾಧ್ಯತೆ ಇದೆ.

ಇದರ ಜೊತೆಗೆ ಉಚಿತ ವೈದ್ಯಕೀಯ ಸೇವೆ, ಕ್ಯಾಂಟೀನ್ ಸೌಲಭ್ಯ, ವಸತಿ ಸೌಲಭ್ಯ, ವಿಮಾ ಕವಚ ಮತ್ತು ಪಿಂಚಣಿ ಯೋಜನೆಗಳಂತಹ ಹಲವು ಪ್ರಯೋಜನಗಳು ಲಭ್ಯವಿರುತ್ತವೆ. ಸಾಹಸಮಯ ವೃತ್ತಿಜೀವನ, ದೇಶಭಕ್ತಿ ಮತ್ತು ಆರ್ಥಿಕ ಭದ್ರತೆ – ಈ ಮೂರು ಕೂಡ ಒಂದೇ ವೇದಿಕೆಯಲ್ಲಿ ದೊರೆಯುವ ಅಪರೂಪದ ಅವಕಾಶವೇ ಇದು.

ಇಂತಹ ಸುವರ್ಣ ಅವಕಾಶವನ್ನು ಯುವ ಸಮುದಾಯವು ಬಳಸಿಕೊಳ್ಳಬೇಕಾಗಿರುವುದು ಅತಿ ಮುಖ್ಯವಾಗಿದೆ.

ವಯೋಮಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನ

ಅಭ್ಯರ್ಥಿಗಳು ಜನವರಿ 02, 2000 ರಿಂದ ಜುಲೈ 01, 2007ರೊಳಗೆ ಜನಿಸಿರಬೇಕು.

ಅರ್ಜಿ ಸಲ್ಲಿಸುವುದು ಸಂಪೂರ್ಣ ಆನ್‌ಲೈನ್ ಮೂಲಕ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ www.joinindiannavy.gov.in� ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು 24 ಫೆಬ್ರವರಿ 2026 ಕೊನೆಯ ದಿನವಾಗಿದೆ. ಕೊನೆಯ ಕ್ಷಣದ ತಾಂತ್ರಿಕ ಸಮಸ್ಯೆಗಳನ್ನು ತಪ್ಪಿಸಲು ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಉತ್ತಮ. ಅದರಂತೆ ತರಬೇತಿಯನ್ನು ಕೂಡ ಚುರುಕುಗೊಳಿಸುವುದು ಉತ್ತಮವಾಗಿದೆ. ಪ್ರತಿ ಬಾರಿಯೂ ಇಂತಹ ಅವಕಾಶಗಳು ಲಭಿಸುವುದಿಲ್ಲ ಸಿಕ್ಕಾಗ ಅದನ್ನು ಬಳಸಿಕೊಳ್ಳಬೇಕು.

ಯಾಕೆ ಈ ಅವಕಾಶವನ್ನು ತಪ್ಪಿಸಿಕೊಳ್ಳಬಾರದು?

  • ಲಿಖಿತ ಪರೀಕ್ಷೆಯಿಲ್ಲ
  • ನೇರ ಮೆರಿಟ್ ಮತ್ತು ಸಂದರ್ಶನದ ಆಧಾರಿತ ಆಯ್ಕೆ
  • ಉತ್ತಮ ಆರಂಭಿಕ ವೇತನ
  • ಗೌರವಯುತ ರಕ್ಷಣಾ ವೃತ್ತಿಜೀವನ
  • ದೇಶ ಸೇವೆಯ ಅಪೂರ್ವ ಅವಕಾಶ

ದೇಶದ ಸಮುದ್ರ ಗಡಿಗಳನ್ನು ಕಾಪಾಡುವ ಗೌರವಾನ್ವಿತ ಪಡೆಗಳಲ್ಲಿ ಒಂದಾದ ಭಾರತೀಯ ನೌಕಾಪಡೆಯಲ್ಲಿ ಅಧಿಕಾರಿಯಾಗಿ ಸೇರುವುದು ಪ್ರತಿಯೊಬ್ಬ ಯುವಕರ ಕನಸಾಗಿರಬಹುದು. ನೀವು ಕೂಡ ಅದರಲ್ಲಿ ಒಬ್ಬರಾಗಬಹುದು. ಆತ್ಮವಿಶ್ವಾಸ, ಶಿಸ್ತು ಮತ್ತು ದೇಶಭಕ್ತಿ ಇದ್ದರೆ ಈ ಅವಕಾಶವನ್ನು ಬಳಸಿಕೊಳ್ಳಿ.

ಸಮಯ ಕಡಿಮೆ. ಆಸಕ್ತ ಅಭ್ಯರ್ಥಿಗಳು ತಡಮಾಡದೆ ಅರ್ಜಿ ಸಲ್ಲಿಸಿ, ನಿಮ್ಮ ರಕ್ಷಣಾ ವೃತ್ತಿಜೀವನದ ಹೊಸ ಅಧ್ಯಾಯವನ್ನು ಆರಂಭಿಸಿ. ಸಮಾಜದಲ್ಲಿ ನಿಮ್ಮ ಘನತೆಯನ್ನ ರುಜುವಾತು  ಮಾಡಿಕೊಳ್ಳುವುದರ ಮೂಲಕ ಕುಟುಂಬಕ್ಕೆ ಆರ್ಥಿಕ ನೆರವನ್ನ ನೀಡುವಂತಹ ಕಾರ್ಯವನ್ನ ನಡೆಸಲು ಮುಂದಾಗಿ.

ಈ ಉದ್ಯೋಗ ಏಕೆ ಬೇಕು

1) ದೇಶ ಸೇವೆ : ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುವುದರಿಂದಾಗಿ ನಾವು  ನೇರವಾಗಿ ದೇಶದ ರಕ್ಷಣೆಗಾಗಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕೈಜೋಡಿಸಬಹುದು. ಅಲ್ಲದೆ ದೇಶಕ್ಕಾಗಿ ಕೆಲಸ ಮಾಡುವ ಭಾಗ್ಯ ನಮ್ಮದಾಗುತ್ತದೆ.

2) ಉತ್ತಮ ವೇತನ ಹಾಗೂ ಸೌಲಭ್ಯಗಳು: ಈ ಭಾರತೀಯ ನೌಕಾಪಡೆಯಲ್ಲಿ ಉತ್ತಮ ಸಂಬಳ ಹಾಗೂ ಸೌಲಭ್ಯಗಳು ಕೂಡ ಸಿಗುತ್ತವೆ. ಸಾಮಾಜಿಕವಾಗಿ ಆರ್ಥಿಕವಾಗಿ ಸದೃಢವಾಗಬಹುದು ಅಲ್ಲದೆ ಸಮಾಜದಲ್ಲಿ ನೀವು ಒಂದು ಉನ್ನತವಾದ ಸ್ಥಾನದಲ್ಲಿ ನಾವು ಇರಬಹುದು.

3) ಗೌರವ: ಭಾರತ ನೌಕಾಪಡೆಯಲ್ಲಿ ಕೆಲಸ ಮಾಡುವವರಿಗೆ ವಿಶೇಷವಾದ ಗೌರವ ಸಿಗುತ್ತದೆ. ಹಾಗೂ ಸಮಾಜದಲ್ಲಿ ಅವರನ್ನು ಉನ್ನತ ಸ್ಥಾನದಲ್ಲಿ ಇಟ್ಟು ನೋಡಲಾಗುತ್ತದೆ. ಇವರು ದೇಶದ ರಕ್ಷಣೆಯಲ್ಲಿ ಅತಿ ದೊಡ್ಡದಾದ ಪಾತ್ರವನ್ನು ನಿರ್ವಹಿಸುತ್ತಿರುತ್ತಾರೆ.

4) ವಿದೇಶ ಪ್ರಯಾಣ ಅವಕಾಶ: ಭಾರತ ನೌಕಾಪಡೆಯಲ್ಲಿ ಶಿಪ್ನಿಂದ ಮತ್ತೊಂದು ಬೇರೆ ಕಂಟ್ರಿಗೆ ಹೋಗುವ ಅವಕಾಶ ಸಿಗುತ್ತದೆ ಆದರೆ ಬೇರೆ ಉದ್ಯೋಗದಲ್ಲಿ ಈ ರೀತಿಯ ಅವಕಾಶ ಸಿಗುವುದು ತೀರಾ ವಿರಳ ಕೆಲವೊಂದು ಉದ್ಯೋಗದಲ್ಲಿ ಇವು ಕೂಡ ಸಿಗುವುದಿಲ್ಲ.

5) ವ್ಯಕ್ತಿತ್ವದ ಅಭಿವೃದ್ಧಿ : ಈ ಉದ್ಯೋಗವು ಒಬ್ಬ ನೌಕರನಿಗೆ ವ್ಯಕ್ತಿತ್ವದ ಬಗ್ಗೆ ತಿಳಿಸಿಕೊಡುತ್ತದೆ. ಅಲ್ಲದೆ ನಾಯಕತ್ವ ಹಾಗೂ ಮತ್ತೊಬ್ಬರನ್ನು ಹುರಿದುಂಬಿಸುವುದು ಹೇಗೆ ಎಂಬುದನ್ನು ಕೂಡ ಇಲ್ಲಿ ಕಲಿಸಲಾಗುತ್ತದೆ.

6) ಉದ್ಯೋಗ ರಕ್ಷಣೆ : ಇದು ಸರ್ಕಾರಿ ಉದ್ಯೋಗಿರುವುದರಿಂದಾಗಿ ಕೊನೆವರೆಗೂ ಕೂಡ ಕೆಲಸ ಮಾಡಬಹುದು ಅಂದರೆ ನಿವೃತ್ತರಾಗುವವರೆಗೂ ಕೂಡ ಕೆಲಸ ಮಾಡಬಹುದು.ಒಂದು ವೇಳೆ ಕೆಲಸ ಮಾಡುವ ಸಂದರ್ಭದಲ್ಲಿ ಏನಾದರೂ ತಪ್ಪು ಮಾಡಿದ್ದಾಗ ಕೆಲವು ದಿನಗಳವರೆಗೆ ಇಲ್ಲಿ ಸಸ್ಪೆನ್ಷನ್ ಕೂಡ ನೀಡಲಾಗುತ್ತದೆ. ನಿವೃತ್ತಿ ಅಂತ ಪೆನ್ಷನ್ ಕೂಡ ಇಲ್ಲಿ ಸಿಗುತ್ತದೆ.

ಈ ಉದ್ಯೋಗವನ್ನು ಕೇವಲ ಹಣಕ್ಕೆ ಮಾತ್ರವಲ್ಲದೆ ಅಥವಾ ಸಾಮಾಜಿಕ ವ್ಯವಸ್ಥೆಯಲ್ಲಿ ಒಂದು ಉನ್ನತ ಸ್ಥಾನವನ್ನು ಗಳಿಸುವ ಸಲುವಾಗಿ ಮಾತ್ರ ಮಾಡದೆ ಆರ್ಥಿಕವಾಗಿ ಕಾಣದೆ ದೇಶದ ಒಂದು ಅಭಿವೃದ್ಧಿಗಾಗಿ ರಕ್ಷಣೆಗಾಗಿ ಕಾಯನಿರ್ವಹಿಸುವುದು ಉನ್ನತವಾದ ಜವಾಬ್ದಾರಿಯಾಗಿದೆ ಕೆಲಸವಾಗಿದೆ.

ಕೊನೆಯ ಮಾತುಗಳು : ಈ ಉದ್ಯೋಗವನ್ನು ಪಡೆಯಲು ಸ್ಪರ್ಧಾರ್ಥಿಗಳು ನಿಗದಿತ ಸಮಯದೊಳಗೆ ಅರ್ಜಿಯನ್ನು ಸಲ್ಲಿಸಬೇಕು ಹಾಗೂ ಅಗತ್ಯವಿರುವಂತಹ ದಾಖಲೆಗಳನ್ನು ಸಲ್ಲಿಸಬೇಕು ಇದು ಒಂದು ಸ್ಪರ್ಧಾತ್ಮಕ ಉದ್ಯೋಗ ವಾಗಿದ್ದು ಇಲಿ ಸಾಕಷ್ಟು ಜನ ಒಂದು ಹುದ್ದೆಗಳಿಗೆ ಉತ್ತಮವಾದ ಫೈಟ್ ಅನ್ನ ನೀಡುತ್ತಾರೆ ಹಾಗಾಗಿ ವಿದ್ಯಾರ್ಥಿಗಳು ನಿರಂತರವಾಗಿ ಶ್ರದ್ಧೆಯಿಂದ ಅಭ್ಯಾಸ ನಡೆಸಬೇಕು.

ಫಿಲಂಸ್ ಮೀನ್ಸ್ ಅಂತಹ ಬಹುದೊಡ್ಡ ಸ್ಟೇಜ್ಗಳು ಇಲ್ಲಿ ಬರುವುದರಿಂದಾಗಿ ವಿದ್ಯಾರ್ಥಿಗಳ ಅಭ್ಯಾಸವು ಸ್ವಲ್ಪ ಕಠಿಣವಾಗಿ ಇರಬೇಕಾಗುತ್ತದೆ. ನಿಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ ನಿಮ್ಮ ಕನಸುಗಳು ನನಸಾಗಲಿ. ನೀವು ಸರಿಯಾದ ಪ್ರಿಪರೇಷನ್ ನಡೆಸಿದ್ದಾಗ ಮಾತ್ರ ಈ ಉದ್ಯೋಗವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

Leave a Comment