ಬೆಂಗಳೂರು: ರಾಜ್ಯದಲ್ಲಿ ವಿದ್ಯಾರ್ಥಿಗಳ ಮೊಬೈಲ್ ಬಳಕೆಗೆ ಕಟ್ಟುನಿಟ್ಟಿನ ನಿಯಮ ಜಾರಿಯಾಗಬಹುದೇ ಎಂಬ ಪ್ರಶ್ನೆ ಇದೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. 16 ವರ್ಷದೊಳಗಿನ ವಿದ್ಯಾರ್ಥಿಗಳು ಶಾಲೆ ಹಾಗೂ ಕಾಲೇಜು ಆವರಣದಲ್ಲಿ ಮೊಬೈಲ್ ಫೋನ್ ಬಳಸುವುದನ್ನು ನಿರ್ಬಂಧಿಸುವ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬೆಳವಣಿಗೆ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳ ನಡುವೆ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ.
16 ವರ್ಷದ ಒಳಗಿನ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಹಾಗೂ ಶಾಲೆಯ ಒಳಗೆ ಮೊಬೈಲ್ ಗಳನ್ನು ಬಳಸುವುದರ ಬಗ್ಗೆ ಈಗಾಗಲೇ ಸಾಕಷ್ಟು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿವೆ. ಈ ಹಿಂದೆ ಕೂಡ 16 ವರ್ಷದ ಒಳಗಿನ ವಿದ್ಯಾರ್ಥಿಗಳ ಹಿತದೃಷ್ಟಿಯಿಂದಾಗಿ ಮೊಬೈಲ್ಗಳನ್ನ ಬ್ಯಾನ್ ಮಾಡುವ ಬಗ್ಗೆ ಸಣ್ಣದಾದ ಚರ್ಚೆ ನಡೆದಿತ್ತು ಆದರೆ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ.
ಇತ್ತೀಚೆಗೆ ನಡೆದ ವಿಶ್ವವಿದ್ಯಾಲಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ಪ್ರಮುಖವಾಗಿ ಚರ್ಚೆಯಾಯಿತು. ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾರ್ಥಿಗಳ ಮೇಲೆ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮ ಹೆಚ್ಚುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಯುವಜನತೆ ತಪ್ಪು ದಾರಿಗೆ ಹೋಗುತ್ತಿರುವ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಅವರು ಹೇಳಿದರು. ಯುವಜನರನ್ನ ಗಮನದಲ್ಲಿ ಇರಿಸಿಕೊಂಡು ಈ ತೀರ್ಮಾನವನ್ನು ತೆಗೆದುಕೊಂಡಿರುವುದು ಶ್ಲಾಘನೀಯ ಆದರೆ ಕಾಲೇಜಿನಲ್ಲಿ ತರಗತಿಯನ್ನು ನಡೆಸುವಾಗ ಆನ್ಲೈನ್ ತರಗತಿಯ ಅವಶ್ಯಕತೆ ಬಂದಾಗ ಮೊಬೈಲ್ ಅನ್ನು ಬಳಸುವುದು ಸರ್ವೇಸಾಮಾನ್ಯವಾಗುತ್ತದೆ. ಹೀಗಿರುವಾಗ 15 ವರ್ಷದ ಒಳಗಿನ ಮಕ್ಕಳಿಗೆ ಫೋನ್ ನೀಡಬೇಕು ಅಥವಾ ಬೇರೆ ಎಂಬುದಾಗಿ ಚರ್ಚೆ ಕುರಿತು ನಡೆಯುತ್ತಿದೆ.
ಈ ವೈರಲ್ ಸುದ್ದಿ ಏನು ಹೇಳುತ್ತಿದೆ
ಕೆಲವು ವರದಿಗಳ ಪ್ರಕಾರ ಈ ವೈರಲ್ ಸುದ್ದಿಯು
16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬಳಕೆ ನಿರ್ಬಂಧಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿಸುತ್ತದೆ
ವಿಶೇಷವಾಗಿ social media & online games ಮೇಲೆ ಇವುಗಳ ಮೇಲೆ ನಿರ್ಬಂಧವನ್ನು ಹೇರುವುದಾಗಿದೆ.
ಮೊಬೈಲ್ ಬಳಕೆಗೆ ನಿಯಂತ್ರಣ ಯಾಕೆ?
ಇಂದಿನ ಕಾಲದಲ್ಲಿ ಮೊಬೈಲ್ ಫೋನ್ ವಿದ್ಯಾರ್ಥಿಗಳ ದೈನಂದಿನ ಜೀವನದ ಅವಿಭಾಜ್ಯ ಭಾಗವಾಗಿಬಿಟ್ಟಿದೆ. ಆನ್ಲೈನ್ ತರಗತಿಗಳು, ಪ್ರಾಜೆಕ್ಟ್ ಕೆಲಸಗಳು, ಮಾಹಿತಿ ಹುಡುಕುವುದು ಸೇರಿದಂತೆ ಹಲವಾರು ಶೈಕ್ಷಣಿಕ ಕಾರ್ಯಗಳಿಗೆ ಮೊಬೈಲ್ ಸಹಾಯಕವಾಗಿದೆ. ಆದರೆ ಇದೇ ಮೊಬೈಲ್ ಅತಿಯಾದ ಸಾಮಾಜಿಕ ಜಾಲತಾಣ ಬಳಕೆ, ಗೇಮಿಂಗ್ ಅಡಿಕ್ಷನ್ ಹಾಗೂ ಅಪ್ರಸ್ತುತ ವಿಷಯಗಳ ಪ್ರಭಾವಕ್ಕೆ ಕಾರಣವಾಗುತ್ತಿದೆ ಎಂಬ ಆತಂಕವೂ ಹೆಚ್ಚಾಗಿದೆ.
ಸಭೆಯಲ್ಲಿ ಸಿಎಂ ಅವರು, “16 ವರ್ಷ ಒಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆಯನ್ನು ನಿಯಂತ್ರಿಸುವ ಅಗತ್ಯ ಇದೆ. ಶಾಲೆ ಮತ್ತು ಕಾಲೇಜು ಆವರಣದಲ್ಲಿ ಮೊಬೈಲ್ ಬಳಕೆಗೆ ನಿರ್ಬಂಧ ಹೇರುವ ಬಗ್ಗೆ ಚಿಂತನೆ ಮಾಡಬೇಕು,” ಎಂದು ಕುಲಪತಿಗಳಿಗೆ ಸೂಚಿಸಿದರು. ವಿದ್ಯಾರ್ಥಿಗಳ ಭವಿಷ್ಯ ಹಿತದೃಷ್ಟಿಯಿಂದ ಈ ಕ್ರಮ ಅವಶ್ಯಕವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು.
ವಿದೇಶಿ ಮಾದರಿಗಳ ಉಲ್ಲೇಖ
ಸಭೆಯಲ್ಲಿ ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿ ಶಾಲಾ ಮಕ್ಕಳಿಗೆ ಮೊಬೈಲ್ ಬಳಕೆಗೆ ನಿರ್ಬಂಧ ಹೇರಿರುವುದನ್ನು ಉದಾಹರಣೆಯಾಗಿ ಉಲ್ಲೇಖಿಸಲಾಯಿತು. ಅಲ್ಲಿ ಈ ಕ್ರಮ ಜಾರಿಯಾದ ನಂತರ ವಿದ್ಯಾರ್ಥಿಗಳ ಗಮನ ಅಧ್ಯಯನದ ಮೇಲೆ ಹೆಚ್ಚು ಕೇಂದ್ರೀಕೃತವಾಗಿದೆ ಎಂಬ ವರದಿಗಳು ಹೊರಬಂದಿವೆ ಎಂದು ಸಿಎಂ ತಿಳಿಸಿದರು.
“ಸೋಶಿಯಲ್ ಮೀಡಿಯಾ ಅತಿಯಾಗಿ ಬಳಕೆ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಇದರಿಂದ ಅವರ ಮಾನಸಿಕ ಆರೋಗ್ಯಕ್ಕೂ ಹಾನಿಯಾಗುತ್ತಿದೆ. ಭವಿಷ್ಯವನ್ನು ಕಾಪಾಡಲು ಕಟ್ಟುನಿಟ್ಟಿನ ಕ್ರಮ ಅಗತ್ಯ,” ಎಂದು ಅವರು ಹೇಳಿದರು.
ಈ ಚರ್ಚೆ ಶುರುವಾಗಲು ಕಾರಣವೇನು?
ಮಕ್ಕಳು ಮೊಬೈಲ್ ಗೆ ಅಡಿಶನ್ ಆಗಿದ್ದು ಆನ್ಲೈನ್ ಗೆ ಬೆಟ್ಟಿಂಗ್ ಗೇಮ್ ಗಳನ್ನು ಅಪ್ಲಿಕೇಶನ್ ಬಳಸುತ್ತಿರುವೆ ಹಿನ್ನೆಲೆ ಅದು ಓದಿನ ಮೇರೆ ವ್ಯತಿರಿಕ್ತವಾಗಿ ಪರಿಣಾಮವನ್ನು ಬೀರುತ್ತದೆ ಎಂಬುದಾಗಿ ಹೇಳಲಾಗುತ್ತಿದೆ.
ಹಾಗಾಗಿ ಈ ಒಂದು ವಿಷಯವೂ ಜಾರಿಯಾಗಬೇಕು ಎಂದು ಹಲವರ ಅಭಿಪ್ರಾಯವಾಗಿದೆ.
ಸರ್ಕಾರದ ಯೋಜನೆ ಏನು
ಶಾಲೆಗಳಲ್ಲಿ ಮೊಬೈಲ್ ಫೋನನ್ನು ಬಳಸುವಂತೆ ನಿಷೇಧಿಸುವುದು ಹಾಗೂ ಅವರಿಗೆ ಅವೇರ್ನೆಸ್ ಪ್ರೋಗ್ರಾಮ್ಗಳನ್ನ ಮಾಡುವಂಥದ್ದು ಹಾಗೂ ಉತ್ತಮವಾದ ಮಾರ್ಗದರ್ಶನ ನೀಡುವುದು ಸರ್ಕಾರದ ಪ್ರಮುಖ ಆಲೋಚನೆಯಾಗಿದೆ.
ಶಾಲೆಗಳು ಈಗಾಗಲೇ ಮೊದಲಿಂದಲೂ ಕೂಡ ಶಾಲೆಗಳಿಗೆ ಮೊಬೈಲ್ ತರುವುದನ್ನು ನಿಷೇಧಿಸಲಾಗಿದೆ ಹಾಗೂ ತರಗತಿಯಲ್ಲಿ ಮೊಬೈಲ್ ಅನ್ನು ಕೂಡ ತೆಗೆಯಬಾರದು ಎಂಬುದನ್ನು ಕಟ್ಟು ನಿಟ್ಟಾಗಿ ಹೇಳಿದೆ .
ಡ್ರಗ್ಸ್ ಪಿಡುಗಿನ ಬಗ್ಗೆ ಕಳವಳ
ಸಭೆಯಲ್ಲಿ ಡ್ರಗ್ಸ್ ಸಮಸ್ಯೆಯೂ ಪ್ರಮುಖ ವಿಷಯವಾಗಿ ಚರ್ಚೆಗೆ ಬಂದಿತು. ಇತ್ತೀಚಿನ ದಿನಗಳಲ್ಲಿ ಕೆಲವು ಶಿಕ್ಷಣ ಸಂಸ್ಥೆಗಳ ಬಳಿ ಡ್ರಗ್ಸ್ ಜಾಲ ಚಟುವಟಿಕೆಗಳ ಬಗ್ಗೆ ವರದಿಗಳು ಕೇಳಿಬರುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಸಿಎಂ ಅಭಿಪ್ರಾಯಪಟ್ಟರು.
“ಡ್ರಗ್ಸ್ ಒಂದು ದೊಡ್ಡ ಪಿಡುಗಾಗಿ ಪರಿಣಮಿಸಿದೆ. ವಿಶ್ವವಿದ್ಯಾಲಯ ಕ್ಯಾಂಪಸ್ಗಳು ಸಂಪೂರ್ಣ ಡ್ರಗ್ಸ್ ಮುಕ್ತವಾಗಬೇಕು. ಯಾವುದೇ ಕಾರಣಕ್ಕೂ ಡ್ರಗ್ಸ್ ಮಾಫಿಯಾಗಳಿಗೆ ಅವಕಾಶ ಕೊಡಬಾರದು,” ಎಂದು ಅವರು ಕಠಿಣ ಸೂಚನೆ ನೀಡಿದರು. ವಿದ್ಯಾರ್ಥಿಗಳ ಮೇಲೆ ಕೆಟ್ಟ ಪ್ರಭಾವ ಬೀರುವ ಯಾವುದೇ ಅಂಶಗಳನ್ನು ತಡೆಗಟ್ಟಲು ಸರ್ಕಾರ ಸಿದ್ಧವಾಗಿದೆ ಎಂಬ ಸಂದೇಶವನ್ನು ಅವರು ಸ್ಪಷ್ಟಪಡಿಸಿದರು.
ಕುಲಪತಿಗಳ ಪ್ರತಿಕ್ರಿಯೆ
ಸಭೆಯಲ್ಲಿ ಭಾಗವಹಿಸಿದ್ದ ಹಲವು ವಿಶ್ವವಿದ್ಯಾಲಯಗಳ ಕುಲಪತಿಗಳು 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ಬ್ಯಾನ್ ಮಾಡುವ ವಿಚಾರಕ್ಕೆ ಒಪ್ಪಿಗೆ ಸೂಚಿಸಿರುವ ಮಾಹಿತಿ ಲಭ್ಯವಾಗಿದೆ. ವಿದ್ಯಾರ್ಥಿಗಳ ಶಿಸ್ತು, ಅಧ್ಯಯನದ ಗುಣಮಟ್ಟ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಉಪಯುಕ್ತವಾಗಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಕಾಲೇಜು ಹಾಗೂ ವಿಶ್ವವಿದ್ಯಾಲಯ ಕ್ಯಾಂಪಸ್ಗಳಲ್ಲಿ ಮೊಬೈಲ್ ಬಳಕೆಗೆ ನಿಯಂತ್ರಣ ಹೇರಿದರೆ ವಿದ್ಯಾರ್ಥಿಗಳ ಗಮನ ವ್ಯತ್ಯಯ ಕಡಿಮೆಯಾಗಬಹುದು. ತರಗತಿಗಳಲ್ಲಿ ಗಮನದಿಂದ ಪಾಠ ಕೇಳುವ ಅಭ್ಯಾಸ ಬೆಳೆಸಲು ಸಹಾಯವಾಗಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪೋಷಕರ ಅಭಿಪ್ರಾಯ
ರಾಜ್ಯದ ಹಲವು ಭಾಗಗಳಲ್ಲಿ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ವಿದ್ಯಾರ್ಥಿಗಳು ತಪ್ಪು ದಾರಿಗೆ ಹೋಗಿರುವ ಘಟನೆಗಳು ಕೇಳಿಬರುತ್ತಿವೆ. ಗೇಮಿಂಗ್ ಅಡಿಕ್ಷನ್, ಆನ್ಲೈನ್ ಮೋಸ, ಅಪ್ರಸ್ತುತ ಸಂಪರ್ಕಗಳು ಇತ್ಯಾದಿ ಸಮಸ್ಯೆಗಳು ಹೆಚ್ಚುತ್ತಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ.
ಈ ಹಿನ್ನೆಲೆಯಲ್ಲಿ ಮೊಬೈಲ್ ಬಳಕೆಗೆ ನಿಯಂತ್ರಣ ತರಬೇಕೆಂಬ ಬೇಡಿಕೆ ಪೋಷಕರಿಂದಲೂ ಕೇಳಿಬರುತ್ತಿದೆ. ಶಾಲಾ ಆವರಣದಲ್ಲಿ ಮೊಬೈಲ್ ನಿರ್ಬಂಧಿಸಿದರೆ ಮಕ್ಕಳ ಗಮನ ಓದಿನ ಕಡೆ ಹೆಚ್ಚು ಕೇಂದ್ರೀಕೃತವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಅಂತಿಮ ನಿರ್ಧಾರ ಯಾವಾಗ?
ಇದೀಗ ರಾಜ್ಯ ಸರ್ಕಾರ ಈ ಕುರಿತು ಅಧಿಕೃತ ನಿರ್ಧಾರ ಕೈಗೊಳ್ಳಬೇಕಿದೆ. 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆಯೇ? ಅಥವಾ ಎಲ್ಲ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತದೆಯೇ? ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಶಿಕ್ಷಣ ತಜ್ಞರು, ಪೋಷಕರು ಮತ್ತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿದ ನಂತರ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಮುಂದಿನ ಕೆಲವು ವಾರಗಳಲ್ಲಿ ಈ ಕುರಿತು ಸ್ಪಷ್ಟ ಮಾರ್ಗಸೂಚಿ ಹೊರಬರುವ ನಿರೀಕ್ಷೆ ಇದೆ.
ಒಟ್ಟಿನಲ್ಲಿ, ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸುವ ಉದ್ದೇಶದಿಂದ ಸರ್ಕಾರ ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ ಎನ್ನುವುದು ಸ್ಪಷ್ಟವಾಗಿದೆ. ಮೊಬೈಲ್ ಬಳಕೆಯ ನಿಯಂತ್ರಣವು ವಿದ್ಯಾರ್ಥಿಗಳ ಶಿಸ್ತು, ಗಮನ ಹಾಗೂ ಆರೋಗ್ಯ ಕಾಪಾಡಲು ಸಹಾಯಕವಾಗಬಹುದೇ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಪಾಲಕರ ಪಾತ್ರವೇನು?
ಮಕ್ಕಳು ನಿರಂತರವಾಗಿ ಮೊಬೈಲ್ ಫೋನ್ ಬಳಸುವಂತೆ ಉತ್ತರವನ್ನು ಹೇಳುವಂತದ್ದು. ಹಾಗೂ ಮೊಬೈಲ್ನಲ್ಲಿ ಇರುವಂತಹ ಅನಗತ್ಯ ಆಪ್ಗಳನ್ನ ತೆಗೆದುಹಾಕುವುದು ಹಾಗೂ ಸ್ಟಡಿಗೆ ಟೈಮ್ ಅನ್ನ ಮೀಸಲಿಡುವಂತದ್ದು. ಹಾಗೂ ಮೊಬೈಲ್ ಬಳಸ್ತಿದ್ದರೆ ಅದರ ಬಗ್ಗೆ ಕಾಳಜಿಯನ್ನ ಪಾಲಕರು ವಹಿಸತಕ್ಕದ್ದು.
ಸಾಧ್ಯವಾಗುವ ನಿಯಮಗಳು ಏನು?
ಶಾಲೆಯಲ್ಲಿ ಮೊಬೈಲ್ ಸಂಪೂರ್ಣವಾಗಿ ನಿಷೇಧ ಮಾಡಬಹುದು.
ಸಾಮಾಜಿಕ ಜಾಲತಾಣ ಬಳಸುವಲ್ಲಿ ಮಿತಿಯನ್ನ ನೀಡಬಹುದು.
ಮಕ್ಕಳು ಮೊಬೈಲ್ ಬಳಸುವುದರಿಂದ ಆಗುವ ಸಮಸ್ಯೆಗಳು
1) ಮಾನಸಿಕ ಸಮಸ್ಯೆಗಳು : ಮೊಬೈಲ್ಗೆ ಅಡಿಕ್ಷನ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.ಅಲ್ಲದೆ ಪ್ರತಿಯೊಂದು ಕೆಲಸದಲ್ಲೂ ಆಸಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಒತ್ತಡ ಹೆಚ್ಚಾಗುವುದರ ಜೊತೆಗೆ ಓದಿನ ಮೇಲೆ ಆಸಕ್ತಿ ಕೂಡ ಕಡಿಮೆಯಾಗುತ್ತದೆ.
2) ಕಣ್ಣಿನ ಸಮಸ್ಯೆಗಳು ಬರಬಹುದು : ಮೊಬೈಲ್ ಸ್ಕ್ರೀನನ್ನ ಹೆಚ್ಚಾಗಿ ನೋಡುವುದರಿಂದ ಕಣ್ಣು ನೋವು ಬರುತ್ತದೆ.ದೃಷ್ಟಿ ಕಡಿಮೆಯಾಗುವ ಸಾಧ್ಯತೆ ಕೂಡ ಹೆಚ್ಚಾಗುತ್ತದೆ.Dry eyes ಸಮಸ್ಯೆ ಕೂಡ ಬರಬಹುದು.
3) ಓದಿನ ಮೇಲೆ ಪರಿಣಾಮ: ಓದುವುದು ಕಡಿಮೆಯಾಗಬಹುದು ಅಂಕಗಳು ಕಡಿಮೆಯಾಗುತ್ತದೆ.
4) ಆಟದ ವ್ಯಸನ: ಅಪಾಯಕಾರಿ ಆದಂತಹ ಗೇಮ್ ಗಳನ್ನ ಬಳಸುವುದರಿಂದಾಗಿ ಅವರಲ್ಲಿ ಉದ್ವೇಗ ಹೆಚ್ಚಾಗಬಹುದು. ನಿರ್ದಿಷ್ಟ ವಿಷಯದ ಮೇಲೆ ಅವರು ತಮ್ಮ ಗಮನವನ್ನು ಕಳೆದುಕೊಳ್ಳುತ್ತಾರೆ.
5) ಸಾಮಾಜಿಕ ಕೌಶಲ್ಯ ಕಡಿಮೆ: ಸ್ನೇಹಿತರು ಹಾಗೂ ಕುಟುಂಬದ ಜೊತೆ ಸಮಯವನ್ನು ಅವರು ಕಳೆಯದೆ ಏಕಾಂತವಾಗಿ ಕಳೆಯಬಹುದು. ಇದರಿಂದಾಗಿ ಕಮ್ಯುನಿಕೇಷನ್ ಸ್ಕಿಲ್ ಕೂಡ ಕಡಿಮೆಯಾಗುತ್ತಾ ಹೋಗುತ್ತದೆ.
6) ಅಶ್ಲೀಲ / ತಪ್ಪು ವಿಷಯಗಳ ಕಡೆ ಗಮನಹರಿಸಬಹುದು
ಅಶ್ಲೀಲ ವಿಷಯಗಳ ಕಡೆ ಹೆಚ್ಚು ಗಮನವನ್ನು ಹರಿಸಬಹುದು. ಹಾಗೂ ಬ್ಯಾಡ ಬಿಟ್ಸ್ ಕೂಡ ಹೆಚ್ಚಾಗಬಹುದು.
ಕೊನೆಯ ಮಾತುಗಳು
ರಾಜ್ಯ ಸರ್ಕಾರವು ಈ ನಿರ್ಧಾರವನ್ನು ಸಂಪೂರ್ಣವಾಗಿ ಜಾರಿಗೆ ತರಲು ಸಾಧ್ಯವಿಲ್ಲ.ಆದರೆ ಮುಂದಿನ ದಿನಗಳಲ್ಲಿ ಈ ಒಂದು ವಿಷಯದ ಮೇಲೆ ಕಟ್ಟುನಿಟ್ಟಿನ ಕ್ರಮವನ್ನ ತೆಗೆದುಕೊಳ್ಳಬಹುದು.
ಮೊಬೈಲ್ ಬಳಸುವುದು ಉಪಯುಕ್ತವಾದರೂ ಕೂಡ ಅತಿಯಾಗಿ ಬಳಸುವುದರಿಂದ ಹಾನಿಯಾಗುತ್ತದೆ ಹಾಗಾಗಿ ಪೋಷಕರು ತಮ್ಮ ಮಕ್ಕಳತ್ತ ಗಮನಹರಿಸುವುದು ಅತಿ ಮುಖ್ಯವಾಗಿರುತ್ತದೆ.